ಮಂದಾ ಬೆಳಗಾವಿ ಮೇಯರ್

7

ಮಂದಾ ಬೆಳಗಾವಿ ಮೇಯರ್

Published:
Updated:
ಮಂದಾ ಬೆಳಗಾವಿ ಮೇಯರ್

ಬೆಳಗಾವಿ: ಸರ್ವಭಾಷಿಕ ಸಮವಿಚಾರ ವೇದಿಕೆಯ ಅಭ್ಯರ್ಥಿ ಮಂದಾ ಬಾಳೇಕುಂದ್ರಿ ಅವರು ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಗುರುವಾರ ಸರ್ವಾನುಮತದಿಂದ ಆಯ್ಕೆಯಾದರು.ಮೇಯರ್ ಸ್ಥಾನಕ್ಕೆ ಸರ್ವಭಾಷಿಕ ವೇದಿಕೆ ವತಿಯಿಂದ ಮಂದಾ ಬಾಳೇಕುಂದ್ರಿ ಹಾಗೂ ಬೆಳಗಾವಿ ಅಭಿವೃದ್ಧಿ ವೇದಿಕೆಯ ವಂದನಾ ಬೀಳಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಸೋಲಿನ ಸುಳಿವರಿತ ಬೆಳಗಾವಿ ಅಭಿವೃದ್ಧಿ ವೇದಿಕೆ ಅಭ್ಯರ್ಥಿ ವಂದನಾ ಬೀಳಗಿ ನಾಮಪತ್ರವನ್ನು ಹಿಂಪಡೆದರು.ಮಂದಾ ಬಾಳೇಕುಂದ್ರಿ ಅವರೊಬ್ಬರೇ ಕಣದಲ್ಲಿ ಉಳಿದಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಪ್ರಾದೇಶಿಕ ಆಯುಕ್ತ ಸಿ.ಎಂ. ಶಿರೋಳ ಘೋಷಿಸಿದರು.ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ಮಂದಾ ಅವರು, ಕನ್ನಡದಲ್ಲೇ ಮಾತನಾಡಿ, ‘ಕನ್ನಡಪರ   ಅಭ್ಯರ್ಥಿ’ ಎಂದು ಬಿಂಬಿಸಿಕೊಂಡದ್ದು   ವಿಶೇಷವಾಗಿತ್ತು.

 ಅವಧಿ ಮುಗಿಯದ ಕಾರಣ ಉಪಮೇಯರ್ ಸ್ಥಾನಕ್ಕೆ ಚುನಾವಣೆ   ನಡೆಯಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry