ಶನಿವಾರ, ಜೂನ್ 19, 2021
26 °C

ಮಂದಿರದ ಆವರಣದಲ್ಲಿ ಮದ್ಯಪಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡಲಸಂಗಮ: ಸಿಂದಗಿ ತಾಲ್ಲೂಕಿನ ಸುಂಗಟಾನ ಗ್ರಾಮದ ಸಿದ್ದಪ್ಪ ದೇವರ ಜಾತ್ರೆಗೆ ಹೋಗಿ ಬಂದ ಭಕ್ತರು ಮುದ್ದೇಬಿಹಾಳ ತಾಲ್ಲೂಕಿನ ಕುಂಚಗನೂರಿನಲ್ಲಿ ಸಿದ್ದಪ್ಪ ದೇವರ ಹೇಳಿಕೆಗಳನ್ನು ಮುಗಿಸಿಕೊಂಡು ಕೂಡಲಸಂಗಮಕ್ಕೆ ಬಂದು ಕೃಷ್ಣ ಮಲ್ಲಪ್ರಭೆಯಲ್ಲಿ  ಸ್ನಾನ ಮಾಡಿ ಸಂಗಮೇಶ್ವರ ದೇವಾಲಯದಲ್ಲಿ ಪ್ರಸಾದ ರೂಪದಲ್ಲಿ ಮದ್ಯ ಸೇವನೆ ಮಾಡುವುದು   ಶುಕ್ರವಾರ ಹಾಗೂ ಶನಿವಾರ ಕಂಡು ಬಂತು.ಸಂಪ್ರದಾಯದ ಹೆಸರಿನಲ್ಲಿ ಮದ್ಯದ ಬಾಟಲಿಗಳ ವಿತರಣೆ ಮಾಡಲಾಗುತ್ತಿದೆ. ವಿಶ್ವಕ್ಕೆ ಕಾಯಕ ಪರಿಕಲ್ಪನೆಯನ್ನು ಕೊಟ್ಟ ಬಸವಣ್ಣನ ನೆಲದಲ್ಲಿ  ಬಹಿರಂಗ ಮದ್ಯಪಾನ ರಾಜಾರೋಷವಾಗಿ ಮುಂದುವರಿದಿದೆ.ಮದ್ಯದ ಬಾಟಲಿಗಳಿಗೆ  ಪೂಜೆ  ಸಲ್ಲಿಸುವುದು. ಮದ್ಯ ಸೇವನೆ ಮಾಡಿ ಕುಣಿದಾಡುವುದು ನಡೆದಿದೆ.  ಪವಿತ್ರ ಸ್ಥಳದಲ್ಲಿ ಮದ್ಯಪಾನ ಮಾಡಬಾರದು ಎಂದು ಬುದ್ದಿವಾದ ಹೇಳಲು ಹೋದವರೊಂದಿಗೆ ಜಗಳವಾಡಿದ ಪ್ರಸಂಗಗಳು ನಡೆದವು.ಕೃಷ್ಣ ಮಲ್ಲಪ್ರಭೆಯಲ್ಲಿ ನೀರು ಇರದೇ ಇರುವುದರಿಂದ ಸುಂಗಟಾನದಿಂದ ಬಂದ ಸಿದ್ದಪ್ಪ ದೇವರ ಭಕ್ತರು ಸಂಗಮೇಶ್ವರ ದೇವಾಲಯದ ಮುಂದೆ ಇರುವ ಕುಡಿಯುವ ನೀರಿನ ಟ್ಯಾಂಕ್ ಮುಂದೆ ಸ್ನಾನ ಮಾಡಿ ಸಂಗಮೇಶ್ವರ ದೇವಾಲಯ, ಬಸವೇಶ್ವರ ಐಕ್ಯ ಮಂಟಪ, ದೇವಾಲಯದ ಮುಂದೆ ಇರುವ ಉದ್ಯಾನ, ರಥದ ಮನೆಯ ಬಳಿ, ಪೂಜಾವನ ಮುಂತಾದ ಸ್ಥಳದಲ್ಲಿ ಪ್ರಸಾದ ರೂಪದಲ್ಲಿ ಮದ್ಯ ಸೇವನೆ ಮಾಡುವುದು ಶನಿವಾರ   ಸಾಮಾನ್ಯವಾಗಿತ್ತು.ಕೂಡಲಸಂಗಮಕ್ಕೆ ಆಗಮಿಸಿದ ಭಕ್ತರಿಗೆ ಬನ್ನಿ ನಿಮ್ಮಗೂ ಪ್ರಸಾದ ಕೊಡುತ್ತೇವೆ ಎಂದು ಮದ್ಯದ ಬಾಟಲಿ ಕೊಡುವ ದೃಶ್ಯವು ಕಂಡು ಬಂತು.ಇಂದಿನ ವೈಜ್ಞಾನಿಕ ಯುಗದಲ್ಲಿಯೂ ದೇವರ ಹೆಸರಿನಲ್ಲಿ ಮದ್ಯಪಾನ ಮಾಡುತ್ತಿರುವುದು  ಹೇಯಕೃತ್ಯ. ಸಂಪ್ರದಾಯದ ವಿರುದ್ಧ  ಹೋರಾಟ ಮಾಡಿದ ಅಣ್ಣನ ನೆಲದಲ್ಲಿ ಸಂಪ್ರದಾಯದ ಹೆಸರಿನಲ್ಲಿ ಮದ್ಯಪಾನ ಮಾಡುತ್ತಿರುವುದು ಸರಿಯಲ್ಲ ಕೊಡಲೇ ಪೋಲಿಸರು ಇದನ್ನು ತಡೆಯಬೇಕು ಎಂದು ಉಡುಪಿಯ ಪ್ರವಾಸಿ ವೆಂಕಟೇಶ ಕುಲಕರ್ಣಿ ಒತ್ತಾಯಿಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.