ಸೋಮವಾರ, ಅಕ್ಟೋಬರ್ 21, 2019
24 °C

ಮಕ್ಕಳನ್ನು ಆಕರ್ಷಿಸುವಲ್ಲಿ ದೃಶ್ಯ ಮಾಧ್ಯಮ ಯಶಸ್ಚಿ

Published:
Updated:

ಹದೇವಪುರ:  `ಶಾಲೆಯಿಂದ ದೂರ ವಿರುವ ಹಾಗೂ ಅಕ್ಷರ ಕಲಿಕೆ ಯಲ್ಲಿ ಆಸಕ್ತಿಯನ್ನು ಕಳೆದುಕೊಂಡಂತಹ ಮಕ್ಕ ಳನ್ನು ಆಕರ್ಷಿಸುವಲ್ಲಿ ದೃಶ್ಯ ಮಾಧ್ಯಮ ಯಶಸ್ವಿಯಾಗಿದೆ~ ಎಂದು ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಕೆ.ಆಂಜನಪ್ಪ ಅಭಿಪ್ರಾಯಪಟ್ಟರು.ಕ್ಷೇತ್ರದ ಭೈರತಿ ಹೊರವಲಯದಲ್ಲಿನ ನ್ಯೂ ಬಾಲ್ಡ್‌ವಿನ್ ಶಾಲೆಯಲ್ಲಿ ನೂತನವಾಗಿ ಆರಂಭಗೊಂಡ ಸ್ಮಾರ್ಟ್ ಕ್ಲಾಸ್ ತರಬೇತಿ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.ಕೆ.ಗೋವಿಂದಪ್ಪ, ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಖಜಾಂಚಿ ರಮಾದೇವಿ, ಮುಖ್ಯಾಧ್ಯಾಪಕಿ ರಾಜಲಕ್ಷ್ಮೀ, ಕೃಷ್ಣಪ್ಪ, ದೊಡ್ಡಗುಬ್ಬಿ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಮುನಿರಾಜು ಹಾಗೂ ಶಾಲಾ ವೃಂದದವರು ಉಪಸ್ಥಿತರಿದ್ದರು.

Post Comments (+)