ಶುಕ್ರವಾರ, ಮೇ 14, 2021
31 °C

ಮಕ್ಕಳನ್ನು ಪ್ರೋತ್ಸಾಹಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಟ (ಬ್ರಹ್ಮಾವರ): ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆಗಳ ಅನಾವರಣ, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಚಿಣ್ಣರ ಚೇತನ ಕಾರ್ಯಕ್ರಮ ಇಲ್ಲಿನ ಕೋಟ ಡಾ.ಶಿವರಾಮ ಕಾರಂತ ಕಲಾಭವನದಲ್ಲಿ ಭಾನುವಾರ ಆರಂಭವಾಯಿತು.ಉದ್ಯಮಿ ಹಾಗೂ ಡಾ.ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, `ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಪ್ರತಿಭೆ ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದರಿಂದ ಭವಿಷ್ಯದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಾರೆ. ಮಕ್ಕಳಲ್ಲಿ ಕಲೆ. ಸಂಪ್ರದಾಯ, ಸಂಸ್ಕೃತಿ ದೂರವಾಗುತ್ತಿರುವ ಇಂದಿನ ಕಾಲದಲ್ಲಿ ಎಳೆ ವಯಸ್ಸಿನಲ್ಲಿಯೇ ಅರಿವು ಮೂಡಿಸಬೇಕು ಎಂದರು.ಆತ್ಮವಿಶ್ವಾಸದ ಪ್ರೇರಣೆ, ಸೃಜನಾತ್ಮಕ ಚಟುವಟಿಕೆಗೆ ಸ್ಫೂರ್ತಿ ಮತ್ತು ಪ್ರತಿಭಾ ಕಾರಂಜಿಯ ಉದ್ದೀಪನಕ್ಕಾಗಿ ಕಲ್ಯಾಣಪುರ ಜೆ.ಸಿ.ಐ, ಯು ಚಾನೆಲ್ ಮತ್ತು ಸಮರ್ಪಣಾ ವೇದಿಕೆ  ಕಾರ್ಯಕ್ರಮ ಆಯೋಜಿಸಿತ್ತು.

ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ರಘು ತಿಂಗಳಾಯ ಅಧ್ಯಕ್ಷತೆ ವಹಿಸಿದ್ದರು.ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸಮರ್ಪಣಾದ ಅಧ್ಯಕ್ಷ ರಾಜು ಶ್ರೀಯಾನ್, ಯು ಚಾನೆಲ್‌ನ ಪ್ರಸಾದ್ ರಾವ್, ಚಿಣ್ಣರ ಚೇತನದ ಸಂಯೋಜಕ ಚಿತ್ರ ಕುಮಾರ್, ಕೃಷ್ಣ ಕಾರ್ಕಡ, ಕಲ್ಯಾಣಪುರ ಜೆ.ಸಿ.ಐ ಯ ಜಗದೀಶ್ ಕೆಮ್ಮಣ್ಣು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.