ಗುರುವಾರ , ಮೇ 19, 2022
23 °C

ಮಕ್ಕಳನ್ನು ಪ್ರೌಢಾವಸ್ಥೆಯಲ್ಲಿ ಸರಿಯಾಗಿ ತಿದ್ದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಟ್ಟೆ (ಕಾರ್ಕಳ): ಪ್ರೌಢಾವಸ್ಥೆಯು ಬದುಕಿನ ಪ್ರಮುಖ ಘಟ್ಟವಾಗಿದ್ದು ಆ ಕಾಲದಲ್ಲಿ ಮಕ್ಳಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಜಸ್ಟಿಸ್ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮನೋವೈದ್ಯ ಡಾ.ಶ್ರೀನಿವಾಸ್ ಭಟ್ ತಿಳಿಸಿದರು. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮದರ್ಜೆ ಕಾಲೇಜಿನ ಸಭಾಭವನದಲ್ಲಿ ಇತ್ತೀಚೆಗೆ ಕಾಲೇಜಿನ ವಿದ್ಯಾರ್ಥಿಗಳ ಶಿಕ್ಷಕ-ರಕ್ಷಕರ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.ಪ್ರೌಢಾವಸ್ಥೆಯಲ್ಲಿ ಆಕರ್ಷಣೆ ಸಹಜವಾದುದುರಿಂದ ಮೊಬೈಲ್ ಬಳಕೆ ಅಧಿಕ ಇರುತ್ತದೆ. ಇದು ಎಷ್ಟೋ ಬಾರಿ ಅನಾಹುತಕ್ಕೆ ಕಾರಣವಾಗುತ್ತದೆ. ಎಷ್ಟೋ ಮಂದಿ ವಿದ್ಯಾರ್ಥಿಗಳು ತಿಳಿಯದಂತೆ ಡ್ರಗ್ಸ್ ಸೇವನೆ, ಸಿಗರೇಟ್ ಹಾಗೂ ಕುಡಿತಕ್ಕೆ ಬಲಿಯಾಗುತ್ತಾರೆ. ಅದನ್ನು ಆರಂಭದ ಹಂತದಲ್ಲೇ ತಡೆಯಬೇಕು. ಮಕ್ಕಳೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡಾಗ ಅವರನ್ನು ಅರ್ಥ ಮಾಡಿಕೊಳ್ಳಬಹುದು. ತಿದ್ದಲೂ ಕಷ್ಟವಾಗುವುದಿಲ್ಲ ಎಂದರು.ಪ್ರಾಂಶುಪಾಲರಾದ ಡಾ.ವೀಣಾ ಬಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಶಿಕ್ಷಕ-ರಕ್ಷಕರ ನೂತನ ಸಂಘ ರಚಿಸಲಾಯಿತು. ಸಂಘದ ಅಧ್ಯಕ್ಷರಾಗಿ ಪ್ರಶಾಂತ ಭಂಡಾರಿ, ಕಾರ್ಯದರ್ಶಿಯಾಗಿ ಕಾಲೇಜಿನ ಗಣಿತಶಾಸ್ತ್ರ ಮುಖ್ಯಸ್ಥೆ ಸುಮನಾ ಎಂ.ಕೆ. ಆಯ್ಕೆಯಾದರು. ಆಂಗ್ಲಭಾಷಾ ಉಪನ್ಯಾಸಕ ಮಚ್ಚೇಂದ್ರ ಬೆಲ್ಜಿ, ವಾಣಿಜ್ಯ ಶಾಸ್ತ್ರ ಉಪನ್ಯಾಸಕ ರಮೇಶ್ ಎಂ, ಅಧ್ಯಕ್ಷ ಅಜಿತ್ ಹೆಗ್ಡೆ, ಕಾರ್ಯದರ್ಶಿ ಪಾಂಡು ಶೆಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.