ಶನಿವಾರ, ಡಿಸೆಂಬರ್ 7, 2019
16 °C

ಮಕ್ಕಳಲ್ಲಿ ಕನ್ನಡ ಪ್ರೀತಿ ಮೂಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳಲ್ಲಿ ಕನ್ನಡ ಪ್ರೀತಿ ಮೂಡಿಸಿ

ಕೋಲಾರ: ಮಕ್ಕಳಲ್ಲಿ ಕನ್ನಡ ಪ್ರೀತಿ, ಶಾಲೆಗಳಲ್ಲಿ ಕನ್ನಡದ ವಾತಾವರಣ ವನ್ನು ಮೂಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಅಭಿಪ್ರಾಯಪಟ್ಟರು.ನಗರದ ಟಿ.ಚೆನ್ನಯ್ಯ ರಂಗಮಂದಿ ರದಲ್ಲಿ  ಗುರುವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನುಡಿತೇರು ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಗಡಿಜಿಲ್ಲೆಯಾದ ಕೋಲಾರದ ಮೂಲಕವೇ ಕನ್ನಡ ನುಡಿತೇರು ರಾಜ್ಯದ ಇತರೆ ಜಿಲ್ಲೆಗಳಿಗೆ ಹೊರ ಟಿರುವುದು ಹೆಮ್ಮೆಯ ವಿಚಾರ. ನುಡಿ ತೇರಿನ ಮೂಲಕವಾದರೂ ನಾಡಿನಲ್ಲಿ ಕನ್ನಡ ಪ್ರೇಮ ದುಪ್ಪ ಟ್ಟಾಗಲಿ ಎಂದು ಅವರು ಹಾರೈಸಿದರು.ನಗರಸಭೆ ಅಧ್ಯಕ್ಷೆ ನಾಜಿಯಾ ಮಾತನಾಡಿ ಕನ್ನಡ ನಾಡಿನಲ್ಲಿ ಕನ್ನಡ ಕಲಿಯುವ ಮತ್ತು ಕಲಿಸುವ ಕೆಲಸ ನಿರಂತರವಾಗಿ ನಡೆಯಬೇಕಾಗಿದೆ ಎಂದರು.ಗಡಿ ಜಿಲ್ಲೆಗಳಲ್ಲಿ ಭಾಷಾಸೌಹಾರ್ದ ಮೂಡಿಸುವ ಸಲುವಾಗಿ ಏರ್ಪ ಡಿಸಿರುವ ಕನ್ನಡ ನುಡಿ ತೇರು ಜಾಗೃತಿ ಜಾಥಾಗೆ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಅಭೂತಪೂರ್ವ ಸ್ವಾಗತ ದೊರಕಿದೆ.ಕನ್ನಡ ಪರ ಕಾರ್ಯಕ್ರಮಗಳನ್ನು ಮೂಡಿಸಲು ಇನ್ನಷ್ಟು ಉತ್ಸಾಹ ಮೂಡಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.ಹೊನ್ನುಡಿ ಪ್ರಭಾಕರ್ ಮಾತ ನಾಡಿದರು. ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ, ತಾ.ಪಂ.ಅಧ್ಯಕ್ಷೆ            ಎನ್.ರಮಾದೇವಿ, ನಗರಸಭೆ ಆಯುಕ್ತೆ ಆರ್.ಶಾಲಿನಿ, ಮುಖ್ಯ ಮಂತ್ರಿ ಚಂದ್ರು ಪತ್ನಿ ಪದ್ಮಾ,ಬಿಇಒ ಶಿವಲಿಂಗಯ್ಯ, ಉಪವಿಭಾಗಾಧಿಕಾರಿ ಆರ್.ಎಸ್.ಪೆದ್ದಪ್ಪಯ್ಯ, ನುಡಿತೇರು ಸಂಚಾಲಕ ನಾಗರಾಜಮೂರ್ತಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಉಮಾಲಕ್ಷ್ಮಿ ವೇದಿಕೆಯಲ್ಲಿದ್ದರು.

ಡಾ.ರಂಗಾರೆಡ್ಡಿಕೋಡಿರಾಂಪುರ ನಿರೂಪಿಸಿದರು.

ಪ್ರತಿಕ್ರಿಯಿಸಿ (+)