`ಮಕ್ಕಳಲ್ಲಿ ಕ್ರೀಡಾಸಕ್ತಿ ಕಡಿಮೆ'

7

`ಮಕ್ಕಳಲ್ಲಿ ಕ್ರೀಡಾಸಕ್ತಿ ಕಡಿಮೆ'

Published:
Updated:

ಮುಳಬಾಗಲು: ಮಕ್ಕಳು ಕ್ರೀಡೆಯ ಕುರಿತು ಆಸಕ್ತಿ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಶಾಸಕ ಕೊತ್ತೊರು ಜಿ.ಮಂಜುನಾಥ್ ಹೇಳಿದರು.

ತಾಲ್ಲೂಕಿನ ಬಾಳಸಂದ್ರ ಗ್ರಾಮದಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ  ಕ್ರೀಡಾ ಮನೋಭಾವ ಕಡಿಮೆಯಾಗಿದೆ. ದೈಹಿಕ ಬಲ ಮತ್ತು ಆತ್ಮಬಲ ಬೆಳಸಿಕೊಳ್ಳುವಲ್ಲಿ ಮಕ್ಕಳು ಮುಂದಾಗುತ್ತಿಲ್ಲ ಎಂದರು.ಅಂಬ್ಲಿಕಲ್ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಅಮರಮ್ಮ ರಾಮಚಂದ್ರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಗದೀಶ್, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಜಗನ್ನಾಥ್, ವಕೀಲ ತಿಮ್ಮರಾಯಪ್ಪ, ಗ್ರಾಮ ಪಂಚಾಯತಿ ಸದಸ್ಯೆ ಸುಜಾತಮ್ಮ ನಾರಾಯಣಪ್ಪ, ಶಿವಪ್ಪ, ಹನುಮಂತಪ್ಪ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಟಿ.ಎಸ್.ಸುಬ್ಬರಾಯಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಇ.ಶ್ರೀನಿವಾಸಗೌಡ, ಮೆಕಾನಿಕ್ ಶ್ರೀನಿವಾಸ್, ರಾಮಾಂಜಿ, ವೆಂಕಟೇಶ್ ಬಾಬು ಇದ್ದರು.ಮೊಬೈಲ್ ಬಳಕೆ ಮಕ್ಕಳ ಅಭಿವೃದ್ಧಿಗೆ ಮಾರಕ

ಬಂಗಾರಪೇಟೆ: ಆಧುನಿಕ ಸಮಾಜದ ಮಕ್ಕಳಲ್ಲಿ ಸೈಬರ್ ಕ್ರೈಂ ಹೆಚ್ಚುತ್ತಿದೆ ಎಂದು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಜಿ.ಎಸ್.ಗೋವಿಂದರಾಜು ಆತಂಕ ವ್ಯಕ್ತಪಡಿಸಿದರು.ಪಟ್ಟಣದ ಸಾಂದೀಪನಿ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಪೊಲೀಸ್ ಇಲಾಖೆ ಏರ್ಪಡಿಸಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೊಬೈಲ್ ಬಳಕೆ ಇಂದಿನ ಮಕ್ಕಳ ಅಭಿವೃದ್ಧಿಗೆ ಮಾರಕ ಎಂದರು.ಹಾಸ್ಯ ಚುಟುಕು, ಕವನ, ಲಾವಣಿಗಳ ಮೂಲಕ ಮನರಂಜನೆ ಜತೆಗೆ ಸಂಚಾರದ ನಿಯಮಗಳ ಬಗ್ಗೆ ಶಾಲಾ ಮಕ್ಕಳಲ್ಲಿ ಕಾನೂನು ಅರಿವು ಮೂಡಿಸಿದರು.

ಮುಖ್ಯಶಿಕ್ಷಕಿ ಎಂ.ಸುಜಾತ, ಶಿಕ್ಷಕರಾದ ಮುತ್ಯಾಲರೆಡ್ಡಿ, ಮೋಹನ್, ಮೋಹನಪ್ರಿಯ, ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry