ಬುಧವಾರ, ಜನವರಿ 29, 2020
24 °C

ಮಕ್ಕಳಲ್ಲಿ ದೇಶಪ್ರೇಮ ಬೆಳೆಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪೇಟೆ: ಶಾಲಾ ಮಕ್ಕಳಲ್ಲಿ ರಾಷ್ಟ್ರೀಯ ಭಾವನೆ ರೂಢಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಅದನ್ನು ಸಮರ್ಥವಾಗಿ ನಿರ್ವಹಿಸಿದರೆ ಮಾತ್ರ ಸಮೃದ್ಧ ಸಮಾಜದ ನಿರ್ಮಾಣ ಸಾಧ್ಯವಾಗು ತ್ತದೆ ಎಂದು ಭಾರತ ಸೇವಾದಳದ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಸಿ. ಶಿವಾನಂದ ತಿಳಿಸಿದರು.ತಾಲ್ಲೂಕಿನ ಕಾಪನಹಳ್ಳಿ ಗವಿಮಠ ದಲ್ಲಿ ಕಳೆದ ಒಂದು ವಾರದಿಂದ ನಡೆದ ಸಹಾಯಕ ಶಿಕ್ಷಣ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡು ಅವರು ಮಾತನಾಡಿದರು.ಇಂದಿನ ಶಾಲಾ ಮಕ್ಕಳು ತೆರೆದ ಮನಸ್ಸಿನಿಂದ ಪ್ರಪಂಚ ಗಮನಿಸು ತ್ತಿದ್ದು, ಹೆಚ್ಚಿನ ಜ್ಞಾನ ತಮ್ಮದಾಗಿ ಸಿಕೊಳ್ಳಲು ಉತ್ಸುಕತೆ ಹೊಂದಿದ್ದಾರೆ. ಅವರ ಜ್ಞಾನದ ಹಸಿವಿಗೆ ಪೂರಕವಾಗಿ ಶಿಕ್ಷಕರು ಅಗತ್ಯ ಸಿದ್ಧತೆಗಳೊಂದಿಗೆ ಪಾಠ ಪ್ರವಚನಗಳಲ್ಲಿ ತೊಡಗಬೇಕು. ಶಿಕ್ಷಕರು ನೈತಿಕ ಮೌಲ್ಯ, ಶಿಸ್ತು, ಸಂಯಮ ಬೆಳೆಸಿಕೊಂಡು, ಅವುಗಳನ್ನು ವಿದ್ಯಾರ್ಥಿಗಳಲ್ಲೂ ಬೆಳೆಸಬೇಕು. ಅನುಕರಣಾಶೀಲತ್ವ ಹೊಂದಿರುವ ಮಕ್ಕಳ ಮನೋಭಾವನೆಗೆ ಧಕ್ಕೆ ಉಂಟಾಗದಂತೆ ಶಿಕ್ಷಕರು ನಡೆದು ಕೊಳ್ಳಬೇಕು ಎಂದು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ. ಪುಟ್ಟಸ್ವಾಮಿಗೌಡ ಮಾತನಾಡಿ, ತರಬೇತಿ ಶಿಬಿರಗಳಿಂದ ಶಿಕ್ಷಕರು ಪಡೆದುಕೊಳ್ಳುವ ಜ್ಞಾನ ಯಥಾವ ತ್ತಾಗಿ ತಮ್ಮ ಮಕ್ಕಳಲ್ಲೂ ತುಂಬಲು ತಪ್ಪದೇ ಕಾರ್ಯಕ್ರಮ ಹಾಕಿಕೊಳ್ಳ ಬೇಕು ಎಂದರು.ಭಾರತ ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಕೆ.ಎಸ್. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಜಿ.ವಿ. ನಾಗರಾಜು, ಖಜಾಂಚಿ ದರಸಗುಪ್ಪೆ ಧನಂಜಯ, ಸದಸ್ಯ ವೆಂಕಟಪ್ಪ, ತಾಲ್ಲೂಕು ಸಮಿತಿ ಉಪಾಧ್ಯಕ್ಷ ಎಚ್.ಆರ್. ಪೂರ್ಣ ಚಂದ್ರ ತೇಜಸ್ವಿ, ಖಜಾಂಚಿ ಎಂ.ಸಿ. ಲೋಕೇಶ್, ಸದಸ್ಯರಾದ ಎಸ್. ಚಂದ್ರ, ಡಿ.ಪಿ. ಸಾವಿತ್ರಿ, ಆರ್.ಎನ್. ಶ್ರೀಧರ್, ಪದ್ಮೇಶ್, ಸಿ.ವಿ. ಧರ್ಮ ರಾಜು, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ್, ಪುರಸಭೆ ಸದಸ್ಯ ಕೆ.ಆರ್. ನೀಲಕಂಠ, ಗ್ರಾ.ಪಂ ಸದಸ್ಯ ಎ.ಬಿ. ಕುಮಾರ್, ಜಿಲ್ಲಾ ಸೇವಾದಳ ಸಂಘಟಕ ಸಿ.ಎಸ್. ಗಣೇಶ್ ಇತರರು ಇದ್ದರು.

ಪ್ರತಿಕ್ರಿಯಿಸಿ (+)