ಮಕ್ಕಳಲ್ಲಿ ದೇಶಪ್ರೇಮ ಮೂಡಿಸಲು ಸಲಹೆ

7

ಮಕ್ಕಳಲ್ಲಿ ದೇಶಪ್ರೇಮ ಮೂಡಿಸಲು ಸಲಹೆ

Published:
Updated:

ಚಿಕ್ಕಬಳ್ಳಾಪುರ: ತಾಲ್ಲೂಕಿನ ಅಗಲ ಗುರ್ಕಿ ಸರ್ಕಾರಿ ದೈಹಿಕ ಶಿಕ್ಷಣ ಕಾಲೇಜು ಆವರಣದಲ್ಲಿ ಭಾರತ ಸೇವಾ ದಳ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಗೆ ನಡೆದ ತರಬೇತಿ ಶಿಬಿರ ಭಾನುವಾರ ಮುಕ್ತಾಯ ಗೊಂಡಿತು. ಜಿಲ್ಲೆಯ ವಿವಿಧ ತಾಲ್ಲೂಕುಗಳ ಶಿಕ್ಷಕರು ಪಾಲ್ಗೊಂಡಿದ್ದ ಈ ಶಿಬಿರದಲ್ಲಿ ರಾಷ್ಟ್ರಧ್ವಜ, ರಾಷ್ಟ್ರಭಕ್ತಿ, ಯೋಗ ಮತ್ತು ಇನ್ನಿತರ ವಿಷಯಗಳ ಕುರಿತು ತರಬೇತಿ ನೀಡಲಾಯಿತು.   ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾರತ ಸೇವಾ ದಳದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪ್ರಕಾಶ್ ಮಾತನಾಡಿ, `ಭಾರತಸೇವಾ ದಳವನ್ನು ಬಲ ಪಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯ ಕ್ರಮಗಳನ್ನು ಮತ್ತು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಚಟುವಟಿಕೆಗಳನ್ನು ನಗರಪ್ರದೇಶಕ್ಕೆ ಮಾತ್ರವೇ ಸೀಮಿತ ಗೊಳಿಸದೇ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಲು ಪಣತೊಟ್ಟಿದ್ದೇವೆ. ಇದಕ್ಕೆ ಪೂರಕವಾಗಿ ಕೆಲಸಕಾರ್ಯಗಳು ನಡೆ ಯುತ್ತಿವೆ~ ಎಂದರು.`ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತಹ ಮಹತ್ವದ ಯೋಜನೆ ಕೈಗೊಂಡಿದ್ದೇವೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಯ್ದ ಶಿಕ್ಷಕ ರಿಗೆ ತರಬೇತಿ ನೀಡುತ್ತೇವೆ. ಅವರು ತರಬೇತಿ ಪೂರ್ಣಗೊಳಿಸಿ, ಶಾಲೆಗೆ ತೆರಳಿದ ನಂತರ ಮಕ್ಕಳಿಗೆ ತರಬೇತಿ ನೀಡುತ್ತಾರೆ.

 

ರಾಷ್ಟ್ರ ಜಾಗೃತಿ ಮತ್ತು ರಾಷ್ಟ್ರಶಕ್ತಿಯ ಮಹತ್ವ ಸಾರುವುದರ ಜೊತೆಗೆ ಮಾನಸಿಕ- ದೈಹಿಕ ತರಬೇತಿ ನೀಡುತ್ತಾರೆ~ ಎಂದರು. ಭಾರತ ಸೇವಾದಳದ ಜಿಲ್ಲಾ ಘಟಕದ ಸಂಘಟಕ ಮಹೇಶಗೌಡ ಮಾತನಾಡಿ, `ಒಂದು ವಾರದ ಕಾಲ ಶಿಕ್ಷಕರು ಮಹಾವಿದ್ಯಾಲಯದಲ್ಲೇ ಉಳಿದುಕೊಂಡಿದ್ದರು.

 

ಬೆಳಿಗ್ಗೆ 5 ಗಂಟೆ ಯಿಂದ ಆರಂಭವಾಗುತ್ತಿದ್ದ ದಿನಚರಿ ಸಂಜೆಯವರೆಗೆ ಮುಂದುವರೆ ಯುತಿತ್ತು. ಸೇವಾ ದಳದ ಹಿರಿಯ ಸಂಘಟಕರು, ಸದಸ್ಯರು ಶಿಬಿರಾರ್ಥಿಗಳಿಗೆ ಉಪನ್ಯಾಸದ ಮೂಲಕ ಮಾರ್ಗದರ್ಶನ ನೀಡಿದ್ದಾರೆ~ ಎಂದರು.ನಗರಸಭೆ ಸದಸ್ಯರಾದ ಎಂ.ವಿ.ಭಾಸ್ಕ ರ್, ರವಿಕುಮಾರ್, ಬಿಜೆಪಿ ಮುಖಂಡ ಎ.ವಿ.ಬೈರೇಗೌಡ, ಸಮಾಜ ಸೇವಕ ಮಂಜುನಾಥ್, ಮಹಾವಿದ್ಯಾಲಯದ ಪ್ರಾಂಶುಪಾಲ ಅರುಣ್ ಮತ್ತಿತರರು ಮಾತನಾಡಿದರು.

ಸೇವಾದಳದ ಪ್ರಮುಖರಾದ ಜಿ.ಮುನಿಸ್ವಾಮಿ, ಮಂಜುನಾಥ್, ಬೋರಯ್ಯ, ವೆಂಕಟ ರೆಡ್ಡಿ, ಬಾಲಪ್ಪ, ಬಾಲರಾಜ್, ನಾರಾ ಯಣಸ್ವಾಮಿ, ಕೆಂಪರಾಜು, ಸುಂದರ್‌ರಾಜ್ ಮತ್ತಿ ತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry