ಮಕ್ಕಳಲ್ಲಿ ಪ್ರಶ್ನಾ ಪ್ರವೃತ್ತಿಯೂ ಬೆಳೆಯಲಿ...

7

ಮಕ್ಕಳಲ್ಲಿ ಪ್ರಶ್ನಾ ಪ್ರವೃತ್ತಿಯೂ ಬೆಳೆಯಲಿ...

Published:
Updated:

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರಾಜ್ಯ ವಿಜ್ಞಾನ ಪರಿಷತ್ತಿನ ಸಹಯೋಗದಲ್ಲಿ ಹಲವು ವೈಜ್ಞಾನಿಕ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಿದೆ~ ಎಂದು ಎಂದು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ್ ಅಭಿಪ್ರಾಯಪಟ್ಟರು.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ನಗರದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಜ್ಞಾನ ಸಾಹಿತಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಸಾಹಿತ್ಯ ವಲಯವು ವಿಜ್ಞಾನ ಸಾಹಿತ್ಯವನ್ನು ಒಳಗೊಂಡು ಬೆಳೆಯಬೇಕಿದೆ. ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಕಾದಂಬರಿ, ಕವಿತೆ ಹೀಗೆ ಹಲವು ಮಾಧ್ಯಮಗಳ ಮೂಲಕ ವೈಚಾರಿಕತೆಯನ್ನು ಪ್ರಚುರ ಪಡಿಸಬಹುದು~ ಎಂದರು.`ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸಬೇಕೆಂಬುದು ಸಂವಿಧಾನದ ಆಶಯ. ರಾಜ್ಯದ ಸಚಿವರು ಸದನದಲ್ಲಿ ನಡೆಸಿದ ನೀಲಿ ಚಿತ್ರ ವೀಕ್ಷಣೆ ಹಗರಣದಿಂದ ತಂತ್ರಜ್ಞಾನವನ್ನು ಎಂತಹ ವಿಚಾರಕ್ಕೆ ಬಳಸಬೇಕು ಎಂಬ ವಿವೇಕದ ಕೊರತೆ ಸ್ಪಷ್ಟಗೊಳ್ಳುತ್ತದೆ~ ಎಂದ ಅವರು, ` ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಯಿಂದ ಭರಪೂರ ಮಾಹಿತಿಯೇನೋ ದೊರಕುತ್ತಿದೆ. ಆದರೆ ಅದನ್ನು ಉಪಯೋಗಿಸುತ್ತಿರುವ ಮಕ್ಕಳಲ್ಲಿ ಪ್ರಶ್ನಿಸುವ ಪ್ರವೃತ್ತಿ ಹೆಚ್ಚಾಗಬೇಕು~ ಎಂದರು.ಹಿರಿಯ ವಿಜ್ಞಾನ ಸಾಹಿತಿ ಪ್ರೊ.ಜೆ.ಆರ್.ಲಕ್ಷ್ಮಣರಾವ್ ಮಾತನಾಡಿ, ವಿಜ್ಞಾನ ಸಾಹಿತ್ಯ ರಚಿಸುವವರಿಗೆ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಆಳವಾದ ಜ್ಞಾನವಿರಬೇಕು. ಸತತ ಓದು ಮತ್ತು ಪರಿಶ್ರಮದಿಂದ ಮಾತ್ರ ವಿಜ್ಞಾನದ ಕರೋಠ ವಾಸ್ತವಾಂಶಗಳನ್ನು ಆಕರ್ಷಕವಾಗಿ ಓದುಗರಿಗೆ ತಿಳಿಯಪಡಿಬಹುದು~ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಸ ಸ್ವಾರಸ್ಯ (ಪ್ರೊ. ಎಂ.ಆರ್. ನಾಗರಾಜು), ಮಾಯಾಚೌಕಗಳ ಮಾಯಾ ಪ್ರಪಂಚ (ಬಿ.ಕೆ.ವಿಶ್ವನಾಥ್‌ರಾವ್), ಹೂಕಣಿವೆ ( ಡಾ.ಶೇಖರ್ ಗೌಳೇರ), ಕುಂಟಾಬಿಲ್ಲೆ (ನಾರಾಯಣ ಬಾಬಾನಗರ) ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಕೆ.ಪುಟ್ಟಸ್ವಾಮಿ ಮಾತನಾಡಿದರು.

ಪರಿಷತ್ತಿನ ಡಾ.ವಸುಂಧರಾ ಭೂಪತಿ, ಡಾ. ಸಿ.ಆರ್.ಚಂದ್ರಶೇಖರ್, ಡಾ.ಪಿ.ಎಸ್.ಶಂಕರ್ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry