ಮಕ್ಕಳಲ್ಲಿ ಮಾನವೀಯ ಮೌಲ್ಯ ಬಿತ್ತಲು ಕರೆ

7

ಮಕ್ಕಳಲ್ಲಿ ಮಾನವೀಯ ಮೌಲ್ಯ ಬಿತ್ತಲು ಕರೆ

Published:
Updated:

ದಾವಣಗೆರೆ: ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ಆಗಬೇಕು ಎಂದು ಮಾಜಿ ಮೇಯರ್ ಕೆ.ಆರ್. ವಸಂತಕುಮಾರ್ ಆಶಿಸಿದರು.`ಪರಿವರ್ತನ~ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಗುರುಸದನ, ಬಾಲಕರ ವಿದ್ಯಾರ್ಥಿನಿಲಯದ ವತಿಯಿಂದ ವಿವೇಕಾನಂದ ಬಡಾವಣೆಯಲ್ಲಿರುವ ಗುರುಸದನ ಬಾಲಕರ ವಿದ್ಯಾರ್ಥಿನಿಲಯದ ಆಶ್ರಯದಲ್ಲಿ ನಡೆದ `ಚಿಣ್ಣರ ಸಂಭ್ರಮ~ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸ್ತುತ, ಪೋಷಕರು ಮಕ್ಕಳ ಬಗ್ಗೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳುತ್ತಿದ್ದಾರೆ. ಈ ಮೂಲಕ ಅವರ ಬಾಲ್ಯ ಕಸಿದುಕೊಳ್ಳುತ್ತಿದ್ದಾರೆ. ರ‌್ಯಾಂಕ್ ಪಡೆಯಬೇಕು, ಎಂಜಿನಿಯರ್, ವೈದ್ಯರಾಗಬೇಕು ಎಂಬ ಪೋಷಕರ ಮಹತ್ವಾಕಾಂಕ್ಷೆಯಿಂದ ಮಕ್ಕಳು ಸ್ವಂತಿಕೆ, ಕ್ರಿಯಾಶೀಲತೆ ಕಳೆದುಕೊಂಡು ಪುಸ್ತಕದ ಹುಳುಗಳಾಗುತ್ತಿದ್ದಾರೆ ಎಂದು ವಿಷಾದಿಸಿದರು.`ಕಲಾಕುಂಚ~ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಶಿಕ್ಷಣದಿಂದ ಮಕ್ಕಳ ವಿದ್ಯಾಭ್ಯಾಸ ಪರಿಪೂರ್ಣತೆ ಪಡೆಯುತ್ತದೆ. ಬಾಲ್ಯದಲ್ಲಿ ನಾಡು-ನುಡಿ, ಪರಂಪರೆ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಶಿಬಿರಗಳು ಸಹಕಾರಿ ಎಂದು ಹೇಳಿದರು.

ನೂತನ ವಿದ್ಯಾಸಂಸ್ಥೆ ನಿರ್ದೇಶಕ ಎಲ್.ಪಿ. ಸುಬ್ರಹ್ಮಣ್ಯ, ಇಂದಿನ ಶಿಕ್ಷಣ ಪದ್ಧತಿಯಲ್ಲಿ ಸುಧಾರಣೆ ಆಗಬೇಕಿದೆ ಎಂದು ನುಡಿದರು.ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ವೀರೇಂದ್ರ ಪಾಟೀಲ್ ಮಾತನಾಡಿ, ಶಿಕ್ಷಣದ ಜತೆಯಲ್ಲಿ ಪಠ್ಯೇತರ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಲು ಮಕ್ಕಳಿಗೆ ಇಂತಹ ಶಿಬಿರ ಸಹಕಾರಿ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಲಲಿತಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಮಲ್ಲಿಕಾರ್ಜುನ ಜಾದವ್ ಮಾತನಾಡಿದರು.ಗುರುಸದನದ ಬಿ.ಎಂ. ರುದ್ರೇಶ್ ಸ್ವಾಗತಿಸಿದರು. ಪ್ರಸಾದ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಲೋಹಿತ್ ವಂದಿಸಿದರು.ನಂತರ ಗಾಯಕಿ ಎಸ್. ಮಾನಸ ಮಾರ್ಗದರ್ಶನದಲ್ಲಿ ಮಕ್ಕಳು ಸಮೂಹ ಗಾಯನ ಪ್ರಸ್ತುತಪಡಿಸಿದರು. ನೃತ್ಯ ಪ್ರದರ್ಶಸಿದರು. ಪ್ರಹ್ಲಾದ ಭಟ್ ನಿರ್ದೇಶನದಲ್ಲಿ `ಸೂರ್ಯ ಬಂದ~ ನಾಟಕವನ್ನು ಶಿಬಿರಾರ್ಥಿಗಳು ಪ್ರದರ್ಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry