ಶನಿವಾರ, ನವೆಂಬರ್ 16, 2019
22 °C

ಮಕ್ಕಳಿಗಾಗಿ ವಿನೂತನ ಆಸ್ಪತ್ರೆ

Published:
Updated:

ಬೆಂಗಳೂರು: ಶಿಶು ಮತ್ತು ಮಾತೃ ಆರೈಕೆಗೆ ಹೆಸರಾದ ಕ್ಲೌಡ್‌ನೈನ್ ಆಸ್ಪತ್ರೆ ಜಯನಗರದಲ್ಲಿ ಮಕ್ಕಳಿಗಾಗಿ ವಿನೂತನ ಆಸ್ಪತ್ರೆಯನ್ನು ಮಂಗಳವಾರ ಉದ್ಘಾಟಿಸಿದೆ.18,000 ಚದರ ಅಡಿಗಳಲ್ಲಿ ನಿರ್ಮಾಣಗೊಂಡಿರುವ ಆಸ್ಪತ್ರೆಯು 3 ಮಹಡಿ ಒಳಗೊಂಡಿದ್ದು, 42 ಹಾಸಿಗೆಯುಳ್ಳ ತುರ್ತು ಚಿಕಿತ್ಸಾ ಸೇವೆ ಒಳಗೊಂಡಿದೆ. ಫಾರ್ಮಸಿ ಹಾಗೂ ಹೆರಿಗೆ ಚೇತರಿಕೆ ಕೋಣೆಗಳಿವೆ. ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಕಿಶೋರ್ ಕುಮಾರ್, `ಸ್ತ್ರೀ ಮತ್ತು ಮಗುವಿನ ಆರೋಗ್ಯದೊಂದಿಗೆ ಮಕ್ಕಳಿಗಾಗಿ ಆಸ್ಪತ್ರೆ ತೆರೆಯಬೇಕೆಂಬ ಬಹುದಿನದ ಕನಸು ನೆರವೇರಿದೆ' ಎಂದರು.ಈ ಆಸ್ಪತ್ರೆಯನ್ನು ರಾಜ್ಯದ ಈತರೆ ಭಾಗಗಳಿಗೂ ವಿಸ್ತರಿಸಲಾಗುವುದು' ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)