ಶುಕ್ರವಾರ, ನವೆಂಬರ್ 22, 2019
19 °C

`ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅಗತ್ಯ'

Published:
Updated:

ಚಾಮರಾಜನಗರ: `ಶಾಲಾಭಿವೃದ್ಧಿ ಹಾಗೂ ಸಮುದಾಯಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕಿದೆ' ಎಂದು ಮೊಬಿಲಟಿ ಇಂಡಿಯಾ ಸಂಸ್ಥೆಯ  ಕಾರ್ಯಕ್ರಮ ವ್ಯವಸ್ಥಾಪಕ ಎಸ್.ಎನ್. ಆನಂದ್ ಸಲಹೆ ನೀಡಿದರು.ತಾಲ್ಲೂಕಿನ ಕುದೇರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಮೊಬಿಲಿಟಿ ಇಂಡಿಯಾ ಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರಿಗೆ ಮತ್ತು ಅಂಗವಿಕಲ ಸ್ವ ಸಹಾಯ ಸಂಘ ಗಳ ಪದಾಧಿಕಾರಿಗಳಿಗೆ ಸಮ ನ್ವಯ ಶಿಕ್ಷಣ ಕುರಿತ ಈಚೆಗೆ ನಡೆದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರಕಬೇಕಾದರೆ ಸಮುದಾಯ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪಾತ್ರ ಮಹತ್ವದಾಗಿರುತ್ತದೆ. ಪ್ರಮುಖವಾಗಿ ಇಂದಿನ ಸಮಿತಿಗಳು ಶಾಲೆಗಳ ಮೂಲಭೂತ ಸೌಕರ್ಯಗಳಿಗೆ ಗಮನ ಹರಿಸುತ್ತಿದೆಯೇ ಹೊರತು ಗುಣಾತ್ಮ ಶಿಕ್ಷಣಕ್ಕೆ ಒತ್ತು ನೀಡುತ್ತಿಲ್ಲ. ಹಾಗಾಗಿ, ಪೋಷಕರು ಶಾಲೆಯ ಎಲ್ಲ ಕಾರ್ಯ ಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿ ಸುವುದರ ಮೂಲಕ ಕಲಿಕೆಯಲ್ಲಿ ಹಿಂದು ಳಿದ ಮಕ್ಕಳ, ವಿಕಲಚೇತನ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ ಎಂದು ಮನವಿ ಮಾಡಿದರು. ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಜಯರಾಮ್ ಮಾತನಾಡಿ  `ಮಕ್ಕಳ ಹಕ್ಕುಗಳ ಸಂರಕ್ಷಣೆಯಲ್ಲಿ ಶಿಕ್ಷಣ ಸಂಸ್ಥೆಯವರ ಪಾತ್ರ ಪ್ರಮುಖವಾಗಿದೆ. ಬಾಲ್ಯ ವಿವಾಹ ನಿಷೇದ ಕಾಯಿದೆ, ಪೋಷಕರ ಅನುಮತಿ ಇಲ್ಲದೆ ಮಕ್ಕಳು ಮತ್ತು ಮಹಿಳೆಯರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಾಣೆಕೆ ಮಾಡುವುದು ಅಪರಾಧವಾಗುತ್ತದೆ. ಒಂದು ವೇಳೆ ಮಾಡಿದರೆ ಶಿಕ್ಷೆಗೆ ಒಳಾಗಗ ಬೇಕಾಗುತ್ತದೆ' ಎಂದು ತಿಳಿಸಿದರು.ಕುದೇರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ (ಸಿಆರ್‌ಪಿ ) ನಾಗರಾಜು ಮಾತನಾಡಿ  `ಶಾಲೆ ಮತ್ತು ಸಮುದಾಯದ ನಡುವೆ ಗಟ್ಟಿಯಾದ ಸಂಬಂಧ ಬೆಸೆಯಬೇಕು. ಇದಕ್ಕಾಗಿ ಶಾಲೆಯ ಮಕ್ಕಳು ಮತ್ತು ಪೋಷಕರ ಸಭೆಯನ್ನು ಆಗಾಗ ಕರೆಯ ಬೇಕೆಂದು ಸಲಹೆ ನೀಡಿದರು.ಸಂಪನ್ಮೂಲ ವ್ಯಕ್ತಿಗಳಾದ ರಾಜಣ್ಣ ಮಾತಾನಾಡಿ, `ಅಂಗವಿಕಲತೆಯ ಬಗ್ಗೆ ಪ್ರಶಿಕ್ಷಣಾರ್ಥಿಗಳಲ್ಲಿರುವ ಧೋರಣೆ ಗಳನ್ನು ಚಿತ್ರದ ಮೂಲಕ ಚರ್ಚೆ ನಡೆಸಿದರು. ಅಂಗವಿಕಲತೆಯ ವ್ಯಾಖ್ಯಾನ, ವಿಧಗಳು ,ಕಾರಣಗಳು ಮತ್ತು ತಡೆಗಟ್ಟುವಿಕೆ ವಿಷಯಗಳನ್ನು ತಿಳಿಸಿಕೊಟ್ಟರು. ಸಮನ್ವಯ ಶಿಕ್ಷಣದ ಜಾರಿಗೆ ತಂದಂತಹ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಾನೂನುಗಳು, ಅಂಗವಿಕಲರ ಮಕ್ಕಳಿಗಿದ್ದ ಶಿಕ್ಷಣ ವ್ಯವಸ್ಥೆಗಳಾದ ವಿಶೇಷ ಶಿಕ್ಷಣ ವ್ಯವಸ್ಥೆ, ಸಮಗ್ರ ಶಿಕ್ಷಣ ಮತ್ತು ಸಮನ್ವಯ ಶಿಕ್ಷಣ ವ್ಯವಸ್ಥೆಗಳ ಪರಿಕಲ್ಪನೆಗಳು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ  ತಿಳಿಸಿಕೊಟ್ಟರು. ತರಬೇತಿ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಬಸವಣ್ಣ, ಮುಖ್ಯ ಶಿಕ್ಷಕ ಕೃಷ್ಣನಾಯಕ್, ಸಹ ಶಿಕ್ಷಕರಾದ ಪುಷ್ಪಲತಾ ಹಾಜರಿದ್ದರು.

ಪ್ರತಿಕ್ರಿಯಿಸಿ (+)