ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಸಲಹೆ

7

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಸಲಹೆ

Published:
Updated:

ಗಜೇಂದ್ರಗಡ: ಸದೃಢ ಸಮಾಜ ನಿರ್ಮಾ­ಣಕ್ಕೆ ಶಿಕ್ಷಣ ಅವಶ್ಯ. ಈ ಹಿನ್ನೆಲೆಯಲ್ಲಿ ಪಾಲಕರು ತಮ್ಮ ಕಷ್ಟ–ಕಾರ್ಪಣ್ಯಗಳನ್ನು ಬದಿಗಿಟ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಶ್ರಮಿಸಬೇಕು ಎಂದು  ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ  ಶಿವಪ್ಪ ಚಲವಾದಿ ಅಭಿಪ್ರಾಯಪಟ್ಟರು.ಮಂಗಳವಾರ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ನಂ–3 ರಲ್ಲಿ ಆಯೋಜಿಸಲಾಗಿದ್ದ 2013–14ನೇ ಸಾಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ ಹಾಗೂ ಇನ್‌ಸ್ಪೈರ್‌ ಅವಾರ್ಡ್‌ ಚೆಕ್‌ ವಿತರಿಸಿ ಮಾತ­ನಾಡಿದ ಅವರು, ಸರ್ಕಾರಗಳು ಶಿಕ್ಷಣಕ್ಕೆ ಪ್ರಮುಖ ಪ್ರಾಶಸ್ತ್ಯ ನೀಡು­ತ್ತಿವೆ.

ಆದರೆ, ಪಾಲಕರ ಇಚ್ಛಾಶಕ್ತಿ ಕೊರತೆಯಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಲಿಕೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಯಶ ಕಾಣುತ್ತಿದೆ. ಹೀಗಾಗಿ ಸದೃಢ ಸಮಾಜ ನಿರ್ಮಾ­ಣದ ಸರ್ಕಾರಗಳ ಕನಸು ಸಾಕಾರ­ಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತ­ಪಡಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿನಿ ಮಹಬೂಬಿ ಕಳಕಾ­ಪುರಗೆ ಇನ್‌ಸ್ಪೈರ್‌ ಅವಾರ್ಡ್‌ ಚೆಕ್‌ ವಿತರಿಸಲಾಯಿತು. ಮುಖ್ಯ ಶಿಕ್ಷಕ ಕೆ.ಐ.­ಹಂಸನೂರ, ಎಸ್‌.ಸಿ.ಎಂ.ಸಿ ಸದಸ್ಯ­ರಾದ ಎ.ಎಚ್‌್.­ಕಟ್ಟಿಮನಿ, ಜಿ.ಬಿ.­ಪತ್ತಾರ, ಐ.ಎಸ್‌.­ಜಾಪಾಳ, ವೈ.ಎಚ್‌.­ಪೂಜಾರ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry