ಮಕ್ಕಳಿಗೆ ಬಯ್ದರೂ ಕ್ಯಾನ್ಸರ್

ಶನಿವಾರ, ಜೂಲೈ 20, 2019
22 °C

ಮಕ್ಕಳಿಗೆ ಬಯ್ದರೂ ಕ್ಯಾನ್ಸರ್

Published:
Updated:

ಹ್ಯೂಸ್ಟನ್ (ಪಿಟಿಐ): ಮಕ್ಕಳಿಗೆ ಬಯ್ಯುವ ಪಾಲಕರಿಗೆ ಇದು ಎಚ್ಚರಿಕೆ. ಚಿಕ್ಕಂದಿನಲ್ಲಿ ಪಾಲಕರಿಂದ ನಿಂದನೆಗೆ ಒಳಗಾಗುವ ಮಕ್ಕಳಲ್ಲಿ ವಯಸ್ಕರಾದಾಗ ಕ್ಯಾನ್ಸರ್ ತಗಲುವ ಅಪಾಯ ಹೆಚ್ಚು ಎಂದು ಹೊಸ ಸಂಶೋಧನೆ ತಿಳಿಸಿದೆ.ತಾಯಿ ಮಗಳಿಗೆ ಮತ್ತು ತಂದೆ ಮಗನಿಗೆ ಬಯ್ದರೆ ಕ್ಯಾನ್ಸರ್ ಅಪಾಯ ಇನ್ನೂ ಹೆಚ್ಚು ಎಂದು ಸಂಶೋಧನೆ ವಿವರಿಸಿದೆ. ಬೈಸಿಕೊಂಡ ನಂತರ ಮಕ್ಕಳು ಸ್ವಲ್ಪ ಸಮಯ ಕೋಪ ತೋರಿಸಿ ನಂತರ ಸರಿ ದಾರಿಗೆ ಬರುತ್ತಾರೆ ಎಂದು ಪಾಲಕರು ಹೇಳುತ್ತಾರೆ.ಆದರೆ, ಇದರ ಪರಿಣಾಮ ದೀರ್ಘಕಾಲದವರೆಗೂ ಇದ್ದು ಯುವಕರಾದ ಬಳಿಕ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ~ ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಪರ್ಡ್ಯು ವಿಶ್ವವಿದ್ಯಾಲಯದ  ಸಮಾಜಶಾಸ್ತ್ರದ ಪ್ರಾಧ್ಯಾಪಕ ಕೆನೆತ್ ಫೆರಾರೊ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry