ಮಕ್ಕಳಿಗೆ ವಿಷ ಕೊಟ್ಟು ತಾಯಿ ಆತ್ಮಹತ್ಯೆ

7

ಮಕ್ಕಳಿಗೆ ವಿಷ ಕೊಟ್ಟು ತಾಯಿ ಆತ್ಮಹತ್ಯೆ

Published:
Updated:

ಗಂಗಾವತಿ (ಕೊಪ್ಪಳ ಜಿ.): ಕೌಟುಂಬಿಕ ಕಲಹ, ಆರ್ಥಿಕ ಸಮಸ್ಯೆಯಿಂದ ಮನನೊಂದ ಮಹಿಳೆಯೊಬ್ಬರು ಮಕ್ಕಳಿಬ್ಬರಿಗೆ ವಿಷ ಪ್ರಾಶನ ಮಾಡಿಸಿ, ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಹೆಬ್ಬಾಳದಲ್ಲಿ ನಡೆದಿದೆ.ಮೃತಪಟ್ಟವರನ್ನು ಚಂದ್ರಕಲಾ (32) ಮಕ್ಕಳಾದ ಅಭಿಷೇಕ (8) ಮತ್ತು ಸಂಗೀತಾ (6) ಎಂದು ಗುರುತಿಸಲಾಗಿದೆ. ಚಂದ್ರಕಲಾ, ಅಭಿಷೇಕ ಶುಕ್ರವಾರವೇ ಮೃತಪಟ್ಟರೆ, ಚಿಕಿತ್ಸೆಗೆ ದಾಖಲಾಗಿದ್ದ ಸಂಗೀತಾ ಶನಿವಾರ ಕೊನೆಯುಸಿರೆಳೆದಳು.ತಂದೆಯ ಮರು ಮದುವೆ, ಕುಟುಂಬ ಪೋಷಣೆಗೆ ಮಲ ಸಹೋದರರ ಅಸಹಕಾರ, ಆರ್ಥಿಕ ಅಡಚಣೆಯಿಂದ ಸಂಸಾರ ನೀಗಿಸಲಾಗದೆ ಆಕೆ  ಸಾವಿಗೆ ಶರಣಾಗಿದ್ದಾಳೆ ಎಂದು ದೂರು ದಾಖಲಿಸಿಕೊಂಡಿರುವ ಗ್ರಾಮೀಣ ಠಾಣೆಯ ಪ್ರಭಾರ ಪೊಲೀಸ್ ಇನ್‌ಸ್ಪೆಕ್ಟರ್ ಪವಾಡಶೆಟ್ಟಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry