ಮಂಗಳವಾರ, ನವೆಂಬರ್ 12, 2019
28 °C

`ಮಕ್ಕಳಿಗೆ ಶಿಕ್ಷಕರ ಮಾರ್ಗದರ್ಶನ ಅಗತ್ಯ'

Published:
Updated:

ಪೀಣ್ಯ ದಾಸರಹಳ್ಳಿ: `ಶಿಕ್ಷಕರ ಮಾರ್ಗದರ್ಶನದಂತೆ ನಡೆದರೆ ಮಕ್ಕಳು ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಲು ಸಾಧ್ಯ' ಎಂದು ವಿಶಾಲ್ ಪಬ್ಲಿಕ್ ಶಾಲೆಯ ಹಳೇ ವಿದ್ಯಾರ್ಥಿ ಹಾಗೂ ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿ ಎಸ್.ಮಹೇಶ್ ಅಭಿಪ್ರಾಯಪಟ್ಟರು.ಟಿ. ದಾಸರಹಳ್ಳಿಯ ಪೈಪ್‌ಲೈನ್ ರಸ್ತೆಯಲ್ಲಿರುವ ವಿಶಾಲ್ ಪಬ್ಲಿಕ್ ಶಾಲೆಯಲ್ಲಿ ಯು.ಕೆ.ಜಿ ಮಕ್ಕಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.ವಿಶಾಲ್ ಶಾಲೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು, `ಶಿಕ್ಷಕರು ಮತ್ತು ಪೋಷಕರ ಅಭಿಲಾಷೆಯಂತೆ ಮಕ್ಕಳು ತಮ್ಮೆಲ್ಲ ಗಮನವನ್ನು ವಿದ್ಯಾಭ್ಯಾಸದ ಕಡೆಗೆ ಹರಿಸಬೇಕು' ಎಂದರು.ಪುಟಾಣಿ ಮಕ್ಕಳಿಗೆ ಶಾಲಾ ಸಂಸ್ಥಾಪಕ ಟಿ.ಕೆ.ನರಸೇಗೌಡ ಪದವಿ ಪ್ರದಾನ ನೀಡಿದರು. ಪ್ರಾಂಶುಪಾಲ ಎಚ್.ಆರ್.ರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ರಮ್ಯಾ ನಿರೂಪಿಸಿದರು. ಶಿಕ್ಷಕಿ ಸುಲ್ತಾನಾ ಸ್ವಾಗತಿಸಿದರು

.

ವಿವಿಧ ಕ್ರೀಡೆಗಳಲ್ಲಿ ಗೆದ್ದ ಪೋಷಕರಿಗೆ ಬಹುಮಾನ ನೀಡಲಾಯಿತು. ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಪ್ರತಿಕ್ರಿಯಿಸಿ (+)