ಮಕ್ಕಳಿಗೆ ಸಂಸ್ಕಾರ ಪಾಠ ಅಗತ್ಯ: ಕರಿಂಜೆ ಶ್ರೀ

7

ಮಕ್ಕಳಿಗೆ ಸಂಸ್ಕಾರ ಪಾಠ ಅಗತ್ಯ: ಕರಿಂಜೆ ಶ್ರೀ

Published:
Updated:

ವಿಟ್ಲ: `ಯುವ ಜನಾಂಗ ಸಂಸ್ಕಾರದ ಕೊರತೆಯಿಂದ ದುರಾಭ್ಯಾಸ, ದುಶ್ಚಟಕ್ಕೆ ಬಲಿಯಾಗುತ್ತಿದೆ. ಹಿರಿಯರು ಮಕ್ಕಳಿಗೆ ಸಂಸ್ಕಾರ, ಧರ್ಮದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ~ ಎಂದು  ಸತ್ಯನಾರಾಯಣಪುರದ ಕರಿಂಜೆ ಮುಕ್ತಾನಂದ ಸ್ವಾಮೀಜಿ ಹೇಳಿದರು.ಕನ್ಯಾನ ಬಾಳೆಕೋಡಿಯ ಕಾಶೀಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರದ ವರ್ಷಾವಧಿ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಶನಿವಾರ ಆಶೀರ್ವಚನ ನೀಡಿದರು.`ಈಗಿನ ಯಾಂತ್ರಿಕ ಜೀವನದಲ್ಲಿ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಈ ನಿಟ್ಟನಲ್ಲಿ ಕಾಶಿ ಕಾಳಭೈರವೇಶ್ವರ ಕ್ಷೇತ್ರ ಉತ್ತಮ ಕೆಲಸ ಮಾಡುತ್ತಿದೆ~ ಎಂದರು.ಶಶಿಕಾಂತಮಣಿ ಸ್ವಾಮೀಜಿ ಮಾತನಾಡಿ `ವ್ಯಕ್ತಿಯನ್ನು ಧರ್ಮದ ಆಧಾರದಲ್ಲಿ ಗುರುತಿಸಲು ಸಾಧ್ಯವಿಲ್ಲ. ಈ ಕ್ಷೇತ್ರ ಸರ್ವಧರ್ಮಿಯರ ಕ್ಷೇತ್ರವಾಗಿ ಬೆಳೆಯಬೇಕು~ ಎಂದರು.ಬಂಟ್ವಾಳ ಶಾಸಕ ರಮಾನಾಥ ರೈ ಮಾತನಾಡಿ, ಕೆಟ್ಟ ಸಂಸ್ಕೃತಿ ತೊಡೆದು ಹಾಕಿ, ಅತ್ಯುತ್ತಮ ಸಂಸ್ಕೃತಿ ಕಟ್ಟಬೇಕಾಗಿದೆ. ಇದರಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಉದ್ಘಾಟಿಸಿದರು.ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಅಧ್ಯಕ್ಷ ಚಿ.ನ.ರಾಮು, ಕನ್ಯಾನ ಗ್ರಾ.ಪಂ. ಅಧ್ಯಕ್ಷ ಕೆ.ಪಿ ಅಬ್ದುಲ್ ರಹಿಮಾನ್, ಸದಸ್ಯ ಕೆ.ಪಿ ರಘರಾಮ ಶೆಟ್ಟಿ, ದೈವ ನರ್ತಕ ಶೀನ ನಲಿಕೆ, ಚಿತ್ರನಟಿಯರಾದ ರಾಧಿಕಾ, ಆಲಿಶಾ, ಕಿರುತೆರೆ ನಟಿಯರಾದ ದೀಪಾ, ದೀಕ್ಷಾ  ಹಾಗೂ ನಿರ್ದೇಶಕ ಎನ್.ಎಸ್.ಶ್ರೀಧರ್ ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry