ಮಕ್ಕಳಿಗೆ ಹಿಂಸೆ: ಗೃಹಮಾತೆ ಅಮಾನತು

7

ಮಕ್ಕಳಿಗೆ ಹಿಂಸೆ: ಗೃಹಮಾತೆ ಅಮಾನತು

Published:
Updated:

ದಾವಣಗೆರೆ: ‘ನಿತ್ಯವೂ ಹೊಡೆಯು­ತ್ತಾರೆ, ನಿಂದಿಸು­ತ್ತಾರೆ’ ಎಂಬ ಮಕ್ಕಳ ಹೇಳಿಕೆ ಆಧರಿಸಿ ಬಳ್ಳಾರಿಯ ಬಾಲಕಿ­ಯರ ಸರ್ಕಾರಿ ಬಾಲಮಂದಿರದ ಗೃಹಮಾತೆ ಶಾಂತಮ್ಮ ಅವರನ್ನು ಅಮಾನತು­ಗೊಳಿಸಿ, ವಿಚಾರಣೆಗೆ ಕ್ರಮ ವಹಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.ಬಳ್ಳಾರಿಯ ಬಾಲಮಂದಿರದಿಂದ ಸೋಮವಾರ ಆರು ಮಕ್ಕಳು ತಪ್ಪಿಸಿಕೊಂಡಿದ್ದರು. ಈ ಪೈಕಿ ನಾಲ್ವರನ್ನು ಮಂಗಳವಾರ ಜಿಲ್ಲೆಯ ಹರಿಹರದ ರೈಲು ನಿಲ್ದಾಣದಲ್ಲಿ ಪೊಲೀಸರು ರಕ್ಷಿಸಿ, ರಾಜ್ಯ ಮಹಿಳಾ ನಿಲಯಕ್ಕೆ ಒಪ್ಪಿಸಿದರು. ಈ ವೇಳೆ ಮಾತನಾಡಿದ್ದ ಬಾಲಕಿಯರು, ‘ತಮಗೆ ಬಾಲಮಂದಿ­ರ­ದಲ್ಲಿ ನಿತ್ಯವೂ ಹಿಂಸೆ ನೀಡಲಾಗುತ್ತಿತ್ತು. ಇದರಿಂದಾಗಿ ಅಲ್ಲಿಂದ ತಪ್ಪಿಸಿಕೊಂಡಿದ್ದೇವೆ. ದಯ­ವಿಟ್ಟು ಮತ್ತೆ ಅಲ್ಲಿಗೆ ಕಳುಹಿಸಬೇಡಿ’ ಎಂದು ಕೋರಿಕೊಂಡಿದ್ದರು.ಈ ಬಗ್ಗೆ ಬುಧವಾರ ‘ಪ್ರಜಾವಾಣಿ’­ಯಲ್ಲಿ ವರದಿ ಪ್ರಕಟ­ವಾಗಿತ್ತು. ಇದರ ಆಧಾರದ ಮೇಲೆ ಬಳ್ಳಾರಿಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವರದಿ ಆಧರಿಸಿ, ಗೃಹಮಾತೆಯನ್ನು ಅಮಾನತು­ಗೊಳಿಸಲಾಗಿದೆ ಎಂದು ನಿರ್ದೇಶಕರು  ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry