ಮಕ್ಕಳೊಂದಿಗೆ ಹಾಡು ಗುಣುಗಿದ ಪೆಂಗ್‌

7

ಮಕ್ಕಳೊಂದಿಗೆ ಹಾಡು ಗುಣುಗಿದ ಪೆಂಗ್‌

Published:
Updated:

ದಕ್ಷಿಣ ದೆಹಲಿಯ ಟ್ಯಾಗೋರ್‌ ಇಂಟ­­ರ್‌­­­ನ್ಯಾಷನಲ್‌ ಶಾಲೆಗೆ ಭೇಟಿ ನೀಡಿದ ಚೀನಾದ ಪ್ರಥಮ ಮಹಿಳೆ ಪೆಂಗ್ ಲಿಯುವಾನ್ ಮಕ್ಕಳೊಂದಿಗೆ ಹಾಡು ಗುಣುಗಿದರು.ಖ್ಯಾತ ಗಾಯಕಿಯೂ ಆಗಿರುವ 51 ವರ್ಷದ ಪೆಂಗ್ 45 ನಿಮಿಷ ಮಕ್ಕಳೊಂದಿಗೆ ಕಳೆದರು.‘ಭಾರತೀಯ ಮಹಿಳೆಯರು ಎಷ್ಟು ಸುಂದ­ರಿ­ಯರೋ ಅಷ್ಟೇ  ಪರಿ­ಶ್ರಮಿ­ಗಳೂ ಹೌದು. ಕೊನೆ­ಯ­ವ­ರೆಗೂ ಕುಟುಂ­­ಬ­­ವನ್ನು ಒಂದಾ­ಗಿ­ಡಲು ಶ್ರಮಿ­ಸು­ತ್ತಾರೆ’ ಎಂದು ಪೆಂಗ್‌ ಭಾರ­ತದ ಮಹಿಳೆ­ಯರನ್ನು ಶ್ಲಾಘಿ­ಸಿ­ದರು.ಭಾರತ ಮತ್ತು ಚೀನಾ ವಿದ್ಯಾ­ರ್ಥಿ­ಗಳು ಪ್ರದರ್ಶಿಸಿದ ಯೋಗ ಮತ್ತು ಆತ್ಮರಕ್ಷಣಾ ಕಲೆಗಳನ್ನು  ಮೆಚ್ಚಿ­ಕೊಂಡರು. ಇದೇ ವೇಳೆ ಚೀನಾದ ಕಥೆಗಳ ಪುಸ್ತಕಗಳನ್ನು ಶಾಲೆಗೆ ಕಾಣಿಕೆಯಾಗಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry