ಮಕ್ಕಳ ಆತ್ಮಹತ್ಯಾ ಸರಣಿ...

7

ಮಕ್ಕಳ ಆತ್ಮಹತ್ಯಾ ಸರಣಿ...

Published:
Updated:

*ನೆಲಮಂಗಲ ಬಳಿಯ ಅಡಪೇಟೆ ಸರ್ಕಾರಿ ಹಿರಿಯ  ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ಕಾರ್ತಿಕ್ (07) ಎಂಬ ವಿದ್ಯಾರ್ಥಿ ತರಗತಿ ಕಿಟಕಿ ಸರಳಿಗೆ ಬೆಲ್ಟ್‌ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. (28 ಜೂನ್ 2011)*ಬೆಂಗಳೂರಿನ ವಿಜಯನಗರದಲ್ಲಿರುವ ಸರ್ವಜ್ಞ ಕಾಲೇಜಿನ ಭೌತಶಾಸ್ತ್ರ ವಿಷಯದ ಉಪನ್ಯಾಸಕಿ ಮಮತಾ (32) ಎಂಬುವರ ಜತೆ ಅವರ ವಿದ್ಯಾರ್ಥಿ ಅಮೋಘ್ (20) ಎಂಬಾತ ಬಿಡದಿಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ. ಘಟನೆಯಲ್ಲಿ ಮಮತಾ ಸಾವನ್ನಪ್ಪಿದ್ದರು. (ನ.7, 2012)*ಅಕ್ಷತಾ ಪಿ.ಹಿರೇಮಠ್ (18) ಎಂಬ ವಿದ್ಯಾರ್ಥಿನಿ ಕೊಡಿಗೇಹಳ್ಳಿ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ. (ನ.15, 2012)*ಕೆಂಗೇರಿ ಆರ್‌ಎನ್‌ಎಸ್ ತಾಂತ್ರಿಕ ಕಾಲೇಜಿನಲ್ಲಿ ಬಿ.ಇ. ಓದುತ್ತಿದ್ದ ರಾಹುಲ್ (22) ಎಂಬಾತ ವಿದ್ಯಾರ್ಥಿನಿಲಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ (ನ.17, 2012)*ಅಮೃತಹಳ್ಳಿ ಸಮೀಪದ ಪಂಪಾಲೇಔಟ್‌ನಲ್ಲಿ ಅನುಷಾ (23) ಎಂಬ ಬಿಬಿಎಂ ವಿದ್ಯಾರ್ಥಿನಿ ಆತ್ಮಹತ್ಯೆ (ನ.21, 2012). ಅವರು ನಗರದ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.* ಹೊಂಗಸಂದ್ರ ಸಮೀಪದ ಗುರುಮೂರ್ತಪ್ಪಲೇಔಟ್‌ನಲ್ಲಿ ಪೃಥ್ವಿರಾಜ್ (22) ಎಂಬ ಡಿಪ್ಲೊಮಾ ವಿದ್ಯಾರ್ಥಿ ಆತ್ಮಹತ್ಯೆ (ನ.21, 2012). ಆತ ದಯಾನಂದ ಸಾಗರ್ ಕಾಲೇಜಿನಲ್ಲಿ ಓದುತ್ತಿದ್ದ.*ಬೆಂಗಳೂರಿನ ವಿಜಯನಗರದ ವಿನಯ್ (20) ಎಂಬಾತ ನೆಲಮಂಗಲ ಬಳಿಯ ಶಿವಗಂಗೆ ಬೆಟ್ಟದಲ್ಲಿರುವ ಶಾಂತಲಾ ಡ್ರಾಪ್‌ನಿಂದ ಕೆಳಗೆ ಬಿದ್ದು ಆತ್ಮಹತ್ಯೆ. ಮಲ್ಲೇಶ್ವರದ ಎಂಇಎಸ್ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದ ಆತ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಬಹುದು ಎಂದು ಆತಂಕಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. (ನ.22, 2012)* ಬೆಂಗಳೂರಿನ ಕೊತ್ತನೂರು ಬಡಾವಣೆಯಲ್ಲಿ ಉತ್ತರಖಂಡ ಮೂಲದ ಪವನ್ ಮೆಹ್ರಾ (20) ಎಂಬಾತ ನೇಣು ಹಾಕಿಕೊಂಡು ಆತ್ಮಹತ್ಯೆ. ಆತ ಖಾಸಗಿ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್  ಓದುತ್ತಿದ್ದ. (ನ.26, 2012)*ಬೆಂಗಳೂರಿನ ದೀಪಾಂಜಲಿನಗರದ ಬಳಿ ಲೋಹಿತ್ (18) ಎಂಬ ವಿದ್ಯಾರ್ಥಿ ರೈಲಿಗೆ ಸಿಲುಕಿ ಆತ್ಮಹತ್ಯೆ. ಆತ ಕೆಎಲ್‌ಇ ಕಾಲೇಜಿನಲ್ಲಿ ಬಿ.ಎಸ್ಸಿ ಓದುತ್ತಿದ್ದ. (ನ.27, 2012)*ಜೆ.ಸಿ.ನಗರ ಸಮೀಪದ ಕುರುಬರಹಳ್ಳಿಯಲ್ಲಿ ಶಿಲ್ಪಾ (17) ಎಂಬ ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ. ಪ್ರಥಮ ಪಿಯುಸಿ ಓದುತ್ತಿದ್ದ ಆಕೆಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಕಾರಣಕ್ಕೆ ಪೋಷಕರು ನಿಂದಿಸಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ (ನ.28-2012).4ಬಿಜಾಪುರದ ಶ್ರೀ ನೀಲಕಂಠೇಶ್ವರ ವಿದ್ಯಾಮಂದಿರ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಅಜಯ್ ಜಾಧವ (10) ಎಂಬ ವಿದ್ಯಾರ್ಥಿ ತರಗತಿಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ. (ನ.28, 2012)* ಮೂಡಲಪಾಳ್ಯ ಸಮೀಪದ ಸಂಜೀವಿನಿನಗರದಲ್ಲಿ ವಿನಯ್‌ಕುಮಾರ್ (17) ಎಂಬಾತ ನೇಣು ಹಾಕಿಕೊಂಡು ಆತ್ಮಹತ್ಯೆ. ಆತ ಶೇಷಾದ್ರಿಪುರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. (ಡಿ.3, 2012)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry