ಮಕ್ಕಳ ಓದಿಗೆ ಯುವಕರ ನೆರವು

7

ಮಕ್ಕಳ ಓದಿಗೆ ಯುವಕರ ನೆರವು

Published:
Updated:
ಮಕ್ಕಳ ಓದಿಗೆ ಯುವಕರ ನೆರವು

ಕಸ್ತೂರ ಬಾ ರಸ್ತೆಯಲ್ಲಿರುವ ರಾಜಸ್ತಾನ ಯೂತ್ ಅಸೋಸಿಯೇಷನ್, ಪಠ್ಯಪುಸ್ತಕ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಏರ್ಪಡಿಸಿತ್ತು. ಇದು ಸಂಘದ 37ನೇ ವರ್ಷದ ಕಾರ್ಯಕ್ರಮ.ಈ ಸಮಾರಂಭದಲ್ಲಿ ಸುಮಾರು 250 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಅವಶ್ಯಕತೆ ಇರುವ 5 ಸಾವಿರ ಪಿಯುಸಿ, ಬಿ.ಕಾಂ, ಬಿ.ಎಸ್ಸಿ ಹಾಗೂ ಬಿಬಿಎಂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಯಿತು.ಬೆಂಗಳೂರು ನಗರ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಪ್ರತಿಭಾವಂತ ಪಿಯುಸಿ ವಿದ್ಯಾರ್ಥಿಗಳಿಗೆ ರೂ.1,500 ಹಾಗೂ ಪದವಿ

ವಿದ್ಯಾರ್ಥಿಗಳಿಗೆ ರೂ. 3,500 ವಿದ್ಯಾರ್ಥಿ ವೇತನ ನೀಡಲಾಯಿತು.ವಿದ್ಯಾರ್ಥಿಗಳ ಹಿಂದಿನ ವರ್ಷದ ಶೈಕ್ಷಣಿಕ ಪ್ರಗತಿಯನ್ನು ಗಮನದಲ್ಲಿಟ್ಟು ಈ ಆಯ್ಕೆ ಮಾಡಲಾಗಿತ್ತು. ಸಂಘದ ಬುಕ್ ಬ್ಯಾಂಕ್ ಯೋಜನೆ ಅಧ್ಯಕ್ಷ ರಾಜೇಶ್ ಷಾ ವಿವರ ನೀಡಿದರು.ತುಮಕೂರು ವಿ.ವಿ. ಕುಲಪತಿ ಚಂದ್ರಮೌಳಿ ಶರ್ಮ, ವಿಶೇಷಾಧಿಕಾರಿ ಡಾ. ಮಾಣಿಕ್ ಘೋಷ್, ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಂ.ಪ್ರಕಾಶ್, ಜಿ.ಟಿ.ಗ್ರೂಫ್ ಆಫ್ ಇನ್‌ಸ್ಟಿಟ್ಯೂಷನ್‌ನ ನಿರ್ದೇಶಕ ಸತ್ಯ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry