ಮಕ್ಕಳ ಚಲನಚಿತ್ರ `ಚಿಲಿಪಿಲಿ' ಪ್ರದರ್ಶನ

ಸೋಮವಾರ, ಜೂಲೈ 22, 2019
26 °C

ಮಕ್ಕಳ ಚಲನಚಿತ್ರ `ಚಿಲಿಪಿಲಿ' ಪ್ರದರ್ಶನ

Published:
Updated:

ರಾಯಚೂರು: ಇಲ್ಲಿನ ಪೂರ್ಣಿಮಾ ಚಲನಚಿತ್ರ ಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಮಕ್ಕಳ ಚಲನಚಿತ್ರೋತ್ಸವ ಆರಂಭಗೊಂಡಿತು.ಬೆಳಿಗ್ಗೆ ಚಲನ ಚಿತ್ರೋತ್ಸವ ಉದ್ಘಾಟನೆ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಅವರು, ಮಕ್ಕಳಿಗೆ ಮನರಂಜನೆ, ಮಕ್ಕಳ ಹಕ್ಕುಗಳು, ಸಾಧನೆ ಮತ್ತು ಪ್ರತಿಭೆ ತಿಳಿಸಿಕೊಡುವಂಥ ಚಲನಚಿತ್ರ ಪ್ರದರ್ಶನ ಮಾಡಲಾಗುತ್ತಿದೆ. ಈ ದಿನ ಚಿಲಿಪಿಲಿ ಚಲನಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು.ದೈಹಿಕ ಶಿಕ್ಷಣ ವಿಭಾಗದ ಅಧಿಕಾರಿ ಬಸವರಾಜ ಬೋರೆಡ್ಡಿ, ಶಿಕ್ಷಣ ಸಂಯೋಜಕ ರಾಜಶೇಖರ ಪಾಟೀಲ್, ಅಖಿಲ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದಂಡಪ್ಪ ಬಿರಾದಾರ ಹಾಗೂ ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry