ಮಕ್ಕಳ ಜತೆ ಹಾಡಿ, ಕುಣಿದ ಸಂಗೀತಜ್ಞ

7

ಮಕ್ಕಳ ಜತೆ ಹಾಡಿ, ಕುಣಿದ ಸಂಗೀತಜ್ಞ

Published:
Updated:

ಬೆಂಗಳೂರು: ಬ್ರಿಟೀಷ್ ಕೌನ್ಸಿಲ್ ನಗರದ ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಏಳು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಇಂಗ್ಲೆಂಡ್‌ನ ಖ್ಯಾತ ಸಂಗೀತ ತರಬೇತುದಾರ ರಿಚರ್ಡ್ ಫ್ರೊಸ್ಟಿಕ್ ಅವರು ಮಕ್ಕಳಿಗೆ ತರಬೇತಿ ನೀಡಿದರು. ವಿಶ್ವದ ಮಕ್ಕಳೆಲ್ಲ ಒಂದೇ ಎಂದು ಸಾರುವ `ಚೈಲ್ಡ್ ಆಫ್ ದ ಯೂನಿವರ್ಸ್~ ಸೇರಿದಂತೆ ಹಲವು ಹಾಡುಗಳನ್ನು ಮಕ್ಕಳಿಗೆ ಹೇಳಿಕೊಟ್ಟರು.ಮಕ್ಕಳು ಸಹ ಹೊಸ ಹೊಸ ಹಾಡುಗಳನ್ನು ಹೇಳಿ ಸಂಭ್ರಮಿಸಿದರು.

ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಯೋಜಿಸಿರುವ ಸ್ಲಂಡಾಗ್ ಮಿಲೇನಿಯರ್ ಚಿತ್ರದ `ಜೈ ಹೋ~ ಗೀತೆಯನ್ನು ಮಕ್ಕಳು ಹಾಡಿದರು.ಮಕ್ಕಳು `ಜೈ ಹೋ~ ಹಾಡನ್ನು ಹಾಡುತ್ತಿದ್ದಾಗ ಚಿತ್ರೀಕರಣ ಮಾಡಲಾಯಿತು. ರಿಚರ್ಡ್ ಅವರು ಆ ವಿಡಿಯೊ ತುಣುಕು ಬಳಸಿ ಮಕ್ಕಳನ್ನು ತರಬೇತುಗೊಳಿಸಲಿದ್ದಾರೆ. ಲಂಡನ್ ಒಲಂಪಿಕ್ಸ್‌ನಲ್ಲಿ `ಜೈ ಹೋ~ ಗೀತೆಯನ್ನು ಹಾಡಲಾಗುತ್ತದೆ.ಆರ್ಮಿ ಪಬ್ಲಿಕ್ ಸ್ಕೂಲ್, ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್, ಬೆಂಗಳೂರು ಇಂಟರ್‌ನ್ಯಾಷನಲ್ ಅಕಾಡೆಮಿ (ಜಯನಗರ), ಕ್ರೈಸ್ಟ್ ಸ್ಕೂಲ್, ಎಂಇಎಸ್ ಕಿಶೋರ್ ಪಬ್ಲಿಕ್ ಸ್ಕೂಲ್, ಶ್ರೀ ರಮಣ ಮಹರ್ಷಿ ಅಕಾಡೆಮಿ ಫಾರ್ ಬ್ಕೈಂಡ್ ಶಾಲೆಯ ಅನೇಕ ಮಕ್ಕಳು ಈ ಸಂಗೀತ ಕಾರ್ಯಕ್ರಮದಲ್ಲಿ ಸಡಗರ, ಸಂಭ್ರಮದಿಂದ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry