ಮಕ್ಕಳ ನಿಧಿಗಾಗಿ ಒಣತ್ಯಾಜ್ಯ ನಿರ್ವಹಣೆ

7

ಮಕ್ಕಳ ನಿಧಿಗಾಗಿ ಒಣತ್ಯಾಜ್ಯ ನಿರ್ವಹಣೆ

Published:
Updated:

ಟಿಇ ಕನೆಕ್ಟಿವಿಟಿ ಮತ್ತು ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಹಯೋಗದಲ್ಲಿ ಕೈಗೊಳ್ಳಲಾಗಿರುವ ‘ಬಿನ್ ಇಟ್ ಬೆಂಗಳೂರು’ ಅಭಿಯಾನ ಮಂಗಳವಾರ ಆರಂಭವಾಯಿತು. ಒಣತ್ಯಾಜ್ಯದ ನಿರ್ವಹಣೆ ಮೂಲಕ ಅಂಗವಿಕಲ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗಾಗಿ ನಿಧಿ ಸಂಗ್ರಹಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ.‘ಜಾಯ್ ಆಫ್ ಗಿವಿಂಗ್’ ಕಾರ್ಯಕ್ರಮದ ಅಂಗವಾಗಿ ನಡೆದಿರುವ ಈ ಅಭಿಯಾನದಲ್ಲಿ ಸಮರ್ಥನಂ ನಗರದ ಕಾರ್ಪೊರೇಟ್ ಸಂಸ್ಥೆಗಳಿಂದ, ವಾರ್ಡ್‌ಗಳಿಂದ ಒಣ ತ್ಯಾಜ್ಯಗಳಾದ ಪೇಪರ್, ಪ್ಲಾಸ್ಟಿಕ್, ಇ-ವೇಸ್ಟ್, ಲೋಹದ ವಸ್ತುಗಳನ್ನು ಸಂಗ್ರಹಿಸಿ, ವೈಜ್ಞಾನಿಕವಾಗಿ ವಿಂಗಡಣೆ ಮಾಡುತ್ತಿದೆ. ಇದರಿಂದ ಬರುವ ಆದಾಯವನ್ನು ಸಮರ್ಥನಂ ವಿಕಲಚೇತನರ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಅಭಿವೃದ್ಧಿಗಾಗಿ ಬಳಸಿಕೊಳ್ಳಲಿದೆ. ಬೆಂಗಳೂರನ್ನು ಹಸಿರು ನಗರವನ್ನಾಗಿಸುವ ನಮ್ಮ ಪ್ರಯತ್ನಕ್ಕೆ ಕಂಪೆನಿಗಳು ಕೈಜೋಡಿಸಬೇಕು ಎಂದು ಸಮರ್ಥನಂ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಜಿ.ಕೆ. ಮಹಾಂತೇಶ್ ಹೇಳಿದರು.ಟಿಇ ಕನೆಕ್ಟಿವಿಟಿಯ ಸಿಎಸ್‌ಆರ್ ಚಾಂಪಿಯನ್ ರಾಜ್ ರಾಜ್‌ಕುಮಾರ್ ಮಾತನಾಡಿ, ಸಮರ್ಥನಂನ ಈ ವಿಭಿನ್ನ ಕಾರ್ಯಕ್ರಮದಲ್ಲಿ ನಾವು ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry