ಸೋಮವಾರ, ಏಪ್ರಿಲ್ 12, 2021
26 °C

ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇದೆ. ಅದನ್ನು ಗುರುತಿಸಿ, ಪ್ರೋತ್ಸಾ ಹಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಾಲಕರು, ಶಿಕ್ಷಕರ ಪಾತ್ರ ಮಹತ್ತರ ವಾಗಿದೆ ಎಂದು ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ನಾಗರಾಜ್ ರಾವ್ ಹೇಳಿದರು.ಕಮಲಪ್ರಿಯ ವೈಜ್ಞಾನಿಕ, ಸಾಂಸ್ಕೃತಿಕ, ಶೈಕ್ಷಣಿಕ ಪ್ರತಿಷ್ಠಾನದ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಇಲ್ಲಿಯ ಸರ್ಕಾರಿ ಪದವಿ ಕಾಲೇಜಿನ ಆವ ರಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯ ಉದ್ಘಾಟನಾ ಸಮಾರಂಭ ದಲ್ಲಿ ಅತಿಥಿಗಳಾಗಿ ಅವರು ಮಾತ ನಾಡಿದರು. ಮಕ್ಕಳ ಆಸಕ್ತಿಯ ಬಗ್ಗೆ ಗಮನ ನೀಡಬೇಕು. ಅವರಿಗೆ ಯಾವ ಕ್ಷೇತ್ರ ದಲ್ಲಿ ಆಸಕ್ತಿ ಇದೆ ಎಂಬುದನ್ನು ಅರ್ಥೈ ಸಿಕೊಳ್ಳಬೇಕು. ಅದೇ ದಿಸೆಯಲ್ಲಿ ಅವರಿಗೆ ಶಿಕ್ಷಣ ನೀಡಿದಲ್ಲಿ ಬಹು ದೊಡ್ಡ ವ್ಯಕ್ತಿಯಾಗಿ ಹೊರಹೊಮ್ಮು ವುದು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.ಕ್ಷೇತ್ರ ಶಿಕ್ಷಣಾಧಿಕಾರಿ ಮಜರ್ ಹುಸೇನ್ ಮಾತನಾಡಿ, ಇಂದಿನ ಮಕ್ಕಳು ಟೆಲಿವಿಷನ್ ಮತ್ತು ಕಂಪ್ಯೂಟರ್‌ನಲ್ಲಿಯೇ ಕಾಲ ಕಳೆ ಯುತ್ತಿದ್ದಾರೆ. ಆಟದಂತಹ ಚಟು ವಟಿಕೆಗಳಲ್ಲಿ ಪಾಲ್ಗೊಳ್ಳುವುದು ಕಡಿಮೆ ಆಗುತ್ತಿದೆ. ಇದರಿಂದಾಗಿ ಮಕ್ಕಳು ಕೋಣೆಗಳಿಗೆ ಮಾತ್ರ ಸೀಮಿತ ವಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಪೈಪೋಟಿಯ ಯುಗದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಬೇಕು. ಆದರೆ ಕೇವಲ ಶಿಕ್ಷಣ ದೊರೆತರೆ ಸಾಲದು, ಒಳ್ಳೆಯ ದೈಹಿಕ ಸಾಮರ್ಥ್ಯ, ಒಳ್ಳೆಯ ಚಿಂತನಾ ಶಕ್ತಿಯೂ ಬರಬೇಕು. ಈ ನಿಟ್ಟಿನಲ್ಲಿ ಆಟ, ಪಠ್ಯೇತರ ಚಟುವಟಿಕೆಗಳು ಅತ್ಯವಶ್ಯಕ ಎಂದರು.ಯಾದಗಿರಿಯಂತಹ ನಗರ ದಲ್ಲಿಯೂ ಚಿತ್ರಕಲೆ, ಸಂಗೀತ ಮುಂತಾದವುಗಳ ತರಬೇತಿ, ಸ್ಪರ್ಧೆ ಗಳು ನಡೆಯಬೇಕು. ಈ ನಿಟ್ಟಿನಲ್ಲಿ ಕಮಲಪ್ರಿಯ ಪ್ರತಿಷ್ಠಾನ ಮಾಡು ತ್ತಿರುವ ಕಾರ್ಯ ಶ್ಲಾಘನೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ಕಮಲಪ್ರಿಯ ಪ್ರತಿಷ್ಠಾನದ ಅಧ್ಯಕ್ಷ ಸುರೇಶ ತಡಬಿಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ರಾಮಲಿಂಗಪ್ಪ ಸ್ವಾಗತಿ ಸಿದರು. ಗುರುಲಿಂಗಯ್ಯ ಹಿರೇಮಠ ನಿರೂಪಿಸಿದರು. ಮಹಾದೇವಪ್ಪ ವಂದಿಸಿದರು. ನಿರ್ಣಾಯಕರಾಗಿ ಡಾ. ಆರ್.ಬಿ. ಚಂದ್ರಕಾಂತ, ಎಸ್.ಡಿ. ಪಾಟೀಲ, ಮೊಹ್ಮದ್ ತಾಹೀರ್, ಬಸವರಾಜ ಗೋಂಧಳಿ, ಬಸವರಾಜ ಕಲೆಗಾರ, ಪಂಪಾಪತಿ ಹುಂಡೇಕಾರ, ಶಂಕರ ಪೂಜಾರಿ ಆಗಮಿಸಿದ್ದರು. ಸುಮಾರು 60ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.