ಬುಧವಾರ, ಜನವರಿ 22, 2020
24 °C

ಮಕ್ಕಳ ಬದುಕನ್ನೇ ಬರಡಾಗಿಸಿದ ಅಂಗವೈಕಲ್ಯ

ಪ್ರಜಾವಾಣಿ ವಾರ್ತೆ/ಎಂ.ವಿ.ಗಾಡದ Updated:

ಅಕ್ಷರ ಗಾತ್ರ : | |

ಶಿಗ್ಗಾವಿ: ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಅದರ ನಡುವಿನ ಬದುಕು ಉತ್ತಮವಾಗಿದ್ದರೆ ಮಾತ್ರ ಮನುಷ್ಯ ಶಾಂತಿ–ನೆಮ್ಮದಿಯಿಂದ ಬದುಕಲು ಸಾಧ್ಯ. ಆದರೆ, ತಾಲ್ಲೂಕಿನ ಖುರ್ಸಾಪುರ ಗ್ರಾಮದ ಖಾಸೀಂಸಾಬ ಮಹ್ಮದ್‌ಸಾಬ್‌ ಇವರ ಮೂವರು ಮಕ್ಕಳು ವಿಚಿತ್ರ ರೋಗಗಕ್ಕೆ ತುತ್ತಾಗಿ ಅಂಗವೈಕಲ್ಯತೆಯಿಂದ ಬಳಲುತ್ತಾ ಅದರಲ್ಲಿಯೇ ಜೀವನ ನೂಕುತ್ತಿದ್ದಾರೆ.ಖಾಸೀಂಸಾಬರಿಗೆ ಐದು ಜನ ಮಕ್ಕಳಿದ್ದು, ಅವರಲ್ಲಿ ಇಬ್ಬರು ಹೆಣ್ಣು ಮೂವರು ಗಂಡು ಮಕ್ಕಳು. ಹೆಣ್ಣು ಮಕ್ಕಳು ಸದೃಢರಾಗಿದ್ದರೆ, ಗಂಡು ಮಕ್ಕಳಾದ ದಾದಾಪಿೀರ್‌(17), ಹಜರತ್‌ ಅಲಿ(11), ಆದಮ್‌ಸಾಬ (11) ಅಂಗವಿಕತೆಗೆ ಒಳಗಾಗಿದ್ದಾರೆ. ಅವರು ಹುಟ್ಟಿದ ಒಂಬತ್ತು ವರ್ಷಗಳ ವರೆಗೆ ಯಾವುದೇ ರೋಗ ರೋಜಿನ ಗಳಿಲ್ಲದೆ ಆರೋಗ್ಯವಂತ ರಾಗಿದ್ದರು. ನಂತರ ಯಾವುದೋ ಒಂದು ನಿಗೂಢ ರೋಗಗಕ್ಕೆ ತುತ್ತಾಗಿ ಚನ್ನಾಗಿದ್ದ ಮಕ್ಕಳ ದೇಹ ಕ್ಷೀಣಿಸುತ್ತಾ ಬಂದಿದೆ. ಇದು ಕುಟುಂಬದ ಸದಸ್ಯರಲ್ಲಿ ಸಹಜವಾಗಿ ಆತಂಕ ಮೂಡಿಸಿದೆ.ಹಿರಿಯ ಮಗ ದಾದಾಫೀರ್‌ 17ನೇ ವಯಸ್ಸಿನಲ್ಲಿ, ಹಜರತಲಿ 11ವರ್ಷದಲ್ಲಿ, ಆದಮಸಾಬ 10ನೇ ವಯಸ್ಸಿನಲ್ಲಿ ಅಂಗವಿಕಲತೆ ಅಂಟಿಕೊಂಡಿದೆ. ಬಡತನದಲ್ಲಿಯೇ ಮಕ್ಕಳ ಈ ರೋಗಕ್ಕೆ ಚಿಕಿತ್ಸೆ ಕೊಡಿಸಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಹುಬ್ಬಳ್ಳಿ, ಹಾವೇರಿ, ಪುದುಚೇರಿ ಸಮೀಪದ ವೆಲ್ಲೂರು ಸೇರಿದಂತೆ ರಾಜ್ಯ, ಅಂತರರಾಜ್ಯಗಳಲ್ಲಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಕೊಡಿಸಿದ್ದಾರೆ. ಅದಕ್ಕಾಗಿ ಸುಮಾರು 7ರಿಂದ 8ಲಕ್ಷ ರೂಪಾಯಿ ಸಾಲ ಮಾಡಿದ್ದಾರೆ. ಆದರೂ ಈವರೆಗೆ ಯಾವೊಬ್ಬ ಮಕ್ಕಳು ಗುಣಮುಖರಾಗಿಲ್ಲ.  ಆದರೆ ಮೂವರು ಮಕ್ಕಳ ಸಂರಕ್ಷಣೆ ಒಂದು ಕೆಲಸವಾಗಿದೆ. ಹೀಗಾಗಿ ಕುಟುಂಬದ ಬಂಡಿ ಸಾಗಿಸುವುದು ಬಲು ಕಷ್ಟಕರವಾಗಿದೆ. ಕೂಲಿ ಮಾಡುತ್ತಾ ಅವರನ್ನು ಸಾಕುವದು ಸಾಧ್ಯವಿಲ್ಲ ದಾಗಿದೆ. ಚಿಕಿತ್ಸೆಗಾಗಿ ಮಾಡಿದ ಸಾಲ ತೀರಿಸುವದು ಹೇಗೆ ? ಮುಂದಿನ  ಚಿಕಿತ್ಸೆಗೆ, ನಿತ್ಯದ ಔಷಧೋ ಪಚಾರಕ್ಕೆ ಹಣ ಹೊಂದಿಸುವುದು ಹೇಗೆ? ಎಂಬ ಚಿಂತೆ ಖಾಸೀಂಸಾಬ ದಂಪತಿಗಳನ್ನು ಕಾಡುತ್ತಿದೆ.ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರ ಟ್ರಸ್ಟ್‌ ವತಿಯಿಂದ ಟ್ರೈಸೈಕಲ್‌ ನೀಡಲಾಗಿದೆ. ಅಲ್ಲದೆ  ಮೂವರು ಮಕ್ಕಳ ಚಿಕಿತ್ಸೆಗೆ ಟ್ರಸ್ಟ್‌ ವತಿಯಿಂದ ಸಹಾಧನ ನೀಡಲಾಗಿದೆ. ತಹಶೀಲ್ದಾರ್ ಸರ್ಕಾರದಿಂದ ಪ್ರತಿ ತಿಂಗಳು ಒಬ್ಬರಿಗೆ ತಲಾ ಒಂದು ಸಾವಿರ ರೂಪಾಯಿಗಳ ಸಹಾಯಧನ ನೀಡಲಾಗುತ್ತಿದೆ. ಆದರೂ ಈ ಹಣದಲ್ಲಿ ಅವರ ಪಾಲನೆ ಪೋಷಣೆ ಮಾಡಲು ಸಾಧ್ಯವಿಲ್ಲದಾಗಿದೆ ಎಂಬುದು ಖಾಸೀಂ ಸಾಬ ತನ್ನ ಅಸಹಾಯಕತೆ ವ್ಯಕ್ತಪಡಿಸುತ್ತಾನೆ.ಮಕ್ಕಳ ಗುಣಮುಖರಾಗಲು ಹೆಚ್ಚಿನ ಚಿಕಿತ್ಸೆಗಾಗಿ ಹಾಗೂ ಅವರ ಪಾಲನೆ ಪೋಷಣೆಗೆ ಇನ್ನೂ ಹೆಚ್ಚಿನ ಹಣ ಬೇಕಾಗಿದೆ. ಹೀಗಾಗಿ ಅವರು ಸಾರ್ವ ಜನಿಕರು ಸಹಾಯ ಹಸ್ತ ನೀಡುವಂತೆ ಮನವಿ ಮಾಡಿದ್ದಾರೆ. ಸಹಾಯಧನ ನೀಡುವವರು.ಖಾಸೀಂಸಾಬ ರಫೀದ್‌ಸಾಬ ಮಹ್ಮದ್‌ ಸಾಬ್‌ನವರ. ಖುರ್ಸಾಪುರ. ಅಂಚೆ–ಬಂಕಾಪುರ. ತಾ.ಶಿಗ್ಗಾವಿ. ಜಿ.ಹಾವೇರಿ (ಮೊ.99863 23774), (ಆಕ್ಸಿಸ್‌ ಬ್ಯಾಂಕ್‌ ಖಾತೆ ನಂ.1290101 00112482) ಸಂಪರ್ಕಿ ಸುವಂತೆ ಮನವಿಯಲ್ಲಿ ಕೋರಿದ್ದಾರೆ.

 

ಪ್ರತಿಕ್ರಿಯಿಸಿ (+)