ಶನಿವಾರ, ಮೇ 21, 2022
25 °C

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕಠಿಣ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಲ್ (ಯೋನ್‌ಹ್ಯಾಪ್): ವಿದ್ಯಾರ್ಥಿಗಳ ಮೇಲೆ, ಅದರಲ್ಲೂ ಅಂಗವಿಕಲ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲು ದಕ್ಷಿಣ ಕೊರಿಯ ಸರ್ಕಾರ ನಿರ್ಧರಿಸಿದೆ.ಇಂತಹ ಅಪರಾಧಕ್ಕಾಗಿ ಶಿಕ್ಷೆ ಅನುಭವಿಸಿದ್ದರೆ ಅಥವಾ ದಂಡ ತೆತ್ತಿದ್ದರೆ ಅಂತಹ ಶಿಕ್ಷಕರನ್ನು ಅಥವಾ ಶಿಕ್ಷಕ ಆಕಾಂಕ್ಷಿಗಳನ್ನು ಶಾಶ್ವತವಾಗಿ ಆ ಕೆಲಸದಿಂದ ದೂರ ಇರಿಸಲು ಸಹ ಸರ್ಕಾರ ತೀರ್ಮಾನಿಸಿದೆ.ಇದರಿಂದ, ಅಂಗವಿಕಲರ ಮೇಲೆ ಅತ್ಯಾಚಾರ ನಡೆಸುವವರಿಗೆ ಈವರೆಗೆ ಇದ್ದ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಐದು ವರ್ಷಕ್ಕೆ ಏರಿಕೆಯಾಗಲಿದೆ. ಇಷ್ಟೇ ಅಲ್ಲದೆ ಇಂತಹ ದುಷ್ಕೃತ್ಯ ಎಸಗಿದವರು ಎಲೆಕ್ಟ್ರಾನಿಕ್ ಕಾಲಂದಿಗೆಯನ್ನೂ ಹಾಕಿಕೊಳ್ಳಬೇಕಾಗುತ್ತದೆ.ದೌರ್ಜನ್ಯಕ್ಕೆ ಒಳಗಾದವರು ದೂರು ನೀಡದೆಯೂ ಶಂಕಿತರ ಮೇಲೆ ಪ್ರಕರಣ ದಾಖಲಿಸಲು ಸಾಧ್ಯವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.