ಮಕ್ಕಳ ರಕ್ತದೊತ್ತಡ ಪತ್ತೆಗೆ ಮೂತ್ರ ಪರೀಕ್ಷೆ

7

ಮಕ್ಕಳ ರಕ್ತದೊತ್ತಡ ಪತ್ತೆಗೆ ಮೂತ್ರ ಪರೀಕ್ಷೆ

Published:
Updated:

ವಾಷಿಂಗ್ಟನ್ (ಪಿಟಿಐ): ಮೂತ್ರದಲ್ಲಿನ ಸೋಡಿಯಂ ಪರೀಕ್ಷೆಯಿಂದ ಮಕ್ಕಳಲ್ಲಿ ಅಧಿಕ ರಕ್ತದೊತ್ತಡ ಉಂಟಾಗುವು ದನ್ನು ಮುಂಚಿತವಾಗಿಯೇ ಗುರುತಿಸ ಬಹುದು ಎಂದು ಹೊಸ ಅಧ್ಯಯನ ವೊಂದು ತಿಳಿಸಿದೆ.10–19 ವರ್ಷದೊಳಗಿನ 19 ಮಕ್ಕಳ ಮೂತ್ರದಲ್ಲಿನ ಸೋಡಿಯಂ ಅಂಶವನ್ನು ಪರೀಕ್ಷಿಸಿದಾಗ ಅವರಲ್ಲಿ 8 ಮಕ್ಕಳ ಮೂತ್ರದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ–7 ಅಂಶ ಕಂಡುಬಂತು. ಇದು ಮಕ್ಕಳಲ್ಲಿ ಹೆಚ್ಚಿನ ರಕ್ತದೊತ್ತಡಕ್ಕೆ ಕಾರಣವಾಗುವ ಅಂಶವಾಗಿದೆ.ಅಗತ್ಯ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಸೋಡಿಯಂ ಮೂತ್ರವನ್ನು ತಡೆಗಟ್ಟುತ್ತದೆ. ಇದು ರಕ್ತನಾಳಗಳ ಮೇಲೆ ಪ್ರಭಾವ ಬೀರಿ, ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಕಾಲಕಾಲಕ್ಕೆ ತಕ್ಕಂತೆ ದೇಹ ಸೋಡಿಯಂ ನಿರ್ವಹಿಸು ವಲ್ಲಿ ವಿಫಲವಾದಲ್ಲಿ ಅತಿಯಾದ ರಕ್ತ ದೊತ್ತಡ ಉಂಟಾಗಬಹುದು. ಅಷ್ಟೇ ಅಲ್ಲ, ಇದು ಹೃದ್ರೋಗ, ಹೃದಯಾ ಘಾತ ಹಾಗೂ  ಪಾರ್ಶ್ವವಾಯು ಸಂಭವಿಸಬಹುದು ಎಂದು ಅಧ್ಯಯನ ತಿಳಿಸಿದೆ.ಅಧಿಕ ರಕ್ತದೊತ್ತಡ ಈಗ ವಯಸ್ಕರ ಕಾಯಿಲೆಯಾಗಿ ಉಳಿದಿಲ್ಲ. ಬದಲಾಗಿ ಈಗ ಚಿಕ್ಕ ಮಕ್ಕಳಲ್ಲೂ ಇದು ಗೋಚ ರಿಸುತ್ತಿದೆ ಎಂದು ಜಾರ್ಜಿಯಾ ರಿಜೆಂಟ್ಸ್‌ ವಿ.ವಿಯ ಹಿರಿಯ ಸಂಶೋಧಕ ಜಾರ್ಜ್ ಹರ್ಷಫೀಲ್ಡ್‌ ಹೇಳಿದ್ದಾರೆ.ನೂತನ ಅಧ್ಯಯನದ ಪ್ರಯೋಗ ದಿಂದ ರಕ್ತದೊತ್ತಡದಿಂದ ಬಳಲುವ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡಲು ಸಾಧ್ಯ ಎಂದೂ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry