`ಮಕ್ಕಳ ವಿಕಾಸಕ್ಕೆ ಯೋಗ ಅವಶ್ಯಕ'

7

`ಮಕ್ಕಳ ವಿಕಾಸಕ್ಕೆ ಯೋಗ ಅವಶ್ಯಕ'

Published:
Updated:

ಬಸವಕಲ್ಯಾಣ: ತಾಲ್ಲೂಕಿನ ಬಟಗೇರಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಯೋಗ ವೇದಾಂತ ಸಮಿತಿಯಿಂದ ಈಚೆಗೆ ಶಾಲಾ ಮಕ್ಕಳ ಎರಡು ದಿನಗಳ ಯೋಗ ಶಿಬಿರ ಏರ್ಪಡಿಸಲಾಗಿತ್ತು. 8 ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.ಬೆಳಗಾವಿಯ ಯೋಗ ಶಿಕ್ಷಕರಾದ ಅರುಣ ಕಪಲೇಶ್ವರ ಮತ್ತು ಸಂಜಯ ಘೋರ್ಪಡೆಯವರು ಮಕ್ಕಳಿಗೆ ಯೋಗ ಕಲಿಸಿದರು. ಈ ಸಂದರ್ಭದಲ್ಲಿ ಮಾರ್ಗದರ್ಶನ ಮಾಡಿದ ಅವರು ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಪ್ರತಿದಿನ ಯೋಗಾಭ್ಯಾಸ ಮಾಡುವುದು ಅತ್ಯಂತ ಅವಶ್ಯಕವಾಗಿದೆ ಎಂದರು.ಮಕ್ಕಳು ಒಳ್ಳೆಯ ಸಂಸ್ಕಾರ ಪಡೆಯಬೇಕು. ದುಶ್ಚಟಗಳಿಗೆ ಬಲಿಯಾಗಬಾರದು. ಜತೆಗೆ ಸತತ ಪರಿಶ್ರಮಪಟ್ಟು ವಿದ್ಯಾಭ್ಯಾಸ ಸಹ ಮಾಡಬೇಕು ಎಂದು ಹೇಳಿದರು.ತಾಲ್ಲೂಕು ಪಂಚಾಯಿತಿ ಸದಸ್ಯ ರಾಘವೇಂದ್ರ ದೇಸಾಯಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಲಂದಾಸ ಇಲ್ಲಾಳೆ ಆಸಾರಾಮಬಾಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಯೋಗ ವೇದಾಂತ ಸಮಿತಿ ಅಧ್ಯಕ್ಷ ಗೋವಿಂದರಾವ ದೇಸಾಯಿ, ಉಪಾಧ್ಯಕ್ಷ ಸಿದ್ಧಾರೂಢ ಮಳಗೆ, ಶಿವಾನಂದ ಜಮಾದಾರ, ಸಂಬಣ್ಣ ಗೌಡೆ, ಜ್ಞಾನೇಶ್ವರ ಮುಳೆ, ಸಾಯಿಬಣ್ಣ ಪಾಟೀಲ, ಬಾಲಾಜಿ ಮುಳೆ, ದಯಾನಂದ ಔಟಿ, ಲಕ್ಷ್ಮಣ ಬೇಡಗೆ, ಪರಶುರಾಮ ಪೂಜಾರಿ, ಸಿಆರ್‌ಪಿಗಳಾದ ವೆಂಕಟರೆಡ್ಡಿ ಯರಬಾಗ, ಶಿವಾಜಿ ಭುರೆ, ಕಲ್ಯಾಣಿ ಔಟಿ, ವಿಜಯಕುಮಾರ ಮೇತ್ರೆ, ಪಂಢರಿ ಕಪನೂರೆ, ರಮೇಶ ಗುರವ ಉಪಸ್ಥಿತರಿದ್ದರು. ಶಿಕ್ಷಕ ಗುಂಡಪ್ಪ ಜಮಾದಾರ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry