ಮಕ್ಕಳ ವಿಜ್ಞಾನ ಸಮಾವೇಶ: ರಾಷ್ಟ್ರಮಟ್ಟಕ್ಕೆ ಆಯ್ಕೆ

7

ಮಕ್ಕಳ ವಿಜ್ಞಾನ ಸಮಾವೇಶ: ರಾಷ್ಟ್ರಮಟ್ಟಕ್ಕೆ ಆಯ್ಕೆ

Published:
Updated:

ಚಿತ್ರದುರ್ಗ: ಮಡಿಕೇರಿಯಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಚಳ್ಳಕೆರೆಯ ಸಹ್ಯಾದ್ರಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ ವಿ.ಕೆ. ವಿನಿಹಾ, ಜಾಹ್ನವಿ, ಮಣಿಕಂಠ, ಸಂದೀಪ್ ಮತ್ತು ಯಶ್ವಂತ್‌ಅವರನ್ನು ಒಳಗೊಂಡ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.`ಉಳಿಸದಿದ್ದಲ್ಲಿ ವಿದ್ಯುತ್ ಭವಿಷ್ಯದಲ್ಲಿ ಕಾದಿದೆ ಆಪತ್ತು' ಎನ್ನುವ ಯೋಜನೆಯನ್ನು ಈ ತಂಡದವರು ಮಂಡಿಸಿದ್ದರು.

ಇದೇ ಡಿ.  27ರಿಂದ 31ರವರೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಈ ಯೋಜನೆಯನ್ನು ಪುನಃ ಮಂಡಿಸಲಿದ್ದಾರೆ.ಈ ವಿದ್ಯಾರ್ಥಿಗಳ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿರುವುದಕ್ಕೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಶಾಲಾ ಸಿಬ್ಬಂದಿ ವರ್ಗ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಅಧ್ಯಕ್ಷ ಚಳ್ಳಕೆರೆಯ ಯರ‌್ರಿಸ್ವಾಮಿ, ಕಾರ್ಯದರ್ಶಿಎಚ್.ಎಸ್.ಟಿ. ಸ್ವಾಮಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry