ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ: ಅರಿವು ಅಗತ್ಯ

ಗುರುವಾರ , ಜೂಲೈ 18, 2019
24 °C

ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ: ಅರಿವು ಅಗತ್ಯ

Published:
Updated:

ಕುಂದಗೋಳ  : ಮಕ್ಕಳು ಮಾನವ ಲೋಕದ ಸುಂದರ ಪುಷ್ಪಗಳು. ಇಂತಹ ಕೋಮಲ ಹೃದಯದ ಮಕ್ಕಳ ಶಿಕ್ಷಣವನ್ನು ಬಲಪಡಿಸಬೇಕು. ಅವರ ಭವಿಷ್ಯತ್ತಿನ ಜೀವನವನ್ನು ಹೂವಿನಂತೆ ಅರಳಿಸಬೇಕು. ಅದಕ್ಕೆ ಶಿಕ್ಷಕರ ಶ್ರಮದೊಂದಿಗೆ ಪಾಲಕರ ಸಹಕಾರವು ಅವಶ್ಯವಾಗಿ ಬೇಕಾಗಿದೆ ಎಂದು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಕೆ. ಚಂದ್ರಶೇಖರ ಹೇಳಿದರು.ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ಶಾಲೆಗಾಗಿ ನಾವು ನೀವು ಕಾರ್ಯ ಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರ್ತಿಸಿ ಅವರನ್ನು ಶಾಲೆಗೆ ತರುವಲ್ಲಿ ಶಿಕ್ಷಕರ ಶ್ರಮವೂ ಅಗತ್ಯವಾಗಿದೆ. ಮಕ್ಕಳ ಹಕ್ಕುಗಳನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ.ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಎಲ್ಲರೂ ಅರಿತುಕೊಳ್ಳುವುದು ಅಗತ್ಯವಾಗಿದೆ. ಎಲ್ಲ ಮಕ್ಕಳು ಉಚಿತವಾಗಿ ಮತ್ತು ಕಡ್ಡಾಯವಾಗಿ ಶಿಕ್ಷಣ ಪಡೆದು ಕೊಳ್ಳುಬೇಕು  ಎಂದರು. ಜಿಲ್ಲಾ ಪಂಚಾ ಯಿತಿ ಸದಸ್ಯೆ ಪ್ರೇಮಾ ಕೊಬ್ಬಯ್ಯ ನವರ, ವೆಂಕನಗೌಡ್ರ ಹಿರೇಗೌಡ್ರ, ಈಶ್ವರಪ್ಪ ಗಂಗಾಯಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry