ಶನಿವಾರ, ಜನವರಿ 18, 2020
20 °C

ಮಕ್ಕಳ ಸಾವಿಗೆ ಬೆಸ್ಕಾಂ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಬಳಗಾರನಹಳ್ಳಿ­ಯಲ್ಲಿ ವಿದ್ಯುತ್‌ ತಂತಿ ತಗುಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದ ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ), ರೂ4 ಲಕ್ಷ ಪರಿಹಾರ ನೀಡಿದೆ.ಆಟವಾಡುತ್ತಿದ್ದ ಜಿಂಟು­ದಾಸ್‌ ಹಾಗೂ ಮಧುಸ್ಮಿತ ದಾಸ್‌ ತುಂಡಾಗಿ ಬಿದ್ದ ವಿದ್ಯುತ್‌ ತಂತಿಯನ್ನು ಮುಟ್ಟಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು. ಇವರು ಅತ್ತಿಬೆಲೆ ಸಮೀಪದ ಖಾಸಗಿ ಕಾರ್ಖಾನೆಯ ಕಾರ್ಮಿಕ­ ಅಸ್ಸಾಂ ಮೂಲದ ದೀಪಕ್‌ ­ದಾಸ್‌ ಮತ್ತು ಪ್ರಣೀತಾ ದಾಸ್‌ ದಂಪತಿ ಮಕ್ಕಳಾಗಿದ್ದರು.ಬೆಸ್ಕಾಂ ವತಿಯಿಂದ ಪ್ರತಿ ಸಾವಿಗೆ ರೂ 2 ಲಕ್ಷದಂತೆ ರೂ 4 ಲಕ್ಷ ಮೊತ್ತದ ಪರಿಹಾರವನ್ನು ದಾಸ್‌ ದಂಪತಿಗೆ ಹಸ್ತಾಂತರಿಸಲಾಯಿತು.

ದಾಸ್‌ ದಂಪತಿ­ಗಿದ್ದುದು ಇಬ್ಬರೇ ಮಕ್ಕಳು. ಇಬ್ಬರೂ ಘಟನೆಯಲ್ಲಿ ಮೃತ­ಪಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)