ಬುಧವಾರ, ಜನವರಿ 22, 2020
20 °C

ಮಕ್ಕಳ ಹಕ್ಕುಗಳನ್ನು ರಕ್ಷಿಸಿ: ಮಾಲಿಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಮಾಜದಲ್ಲಿ ಅನೇಕ ಮಕ್ಕಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಅಂಥವರನ್ನು ಕಾನೂನಿನ ಮೂಲಕ ರಕ್ಷಿಸಿ ಜೀವನ ರೂಪಿಸಿಕೊಳ್ಳಲು ಎಲ್ಲರೂ ಅನುವು ಮಾಡಿ­ಕೊಡಬೇಕಿದೆ ಎಂದು ಡಾ. ಕೆ.ಎಸ್‌. ಮಾಲಿಪಾಟೀಲ ಹೇಳಿದರು.

ನಗರದ ಶಹಾಬಜಾರ್‌ ಆರಾಧನಾ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಯಲ್ಲಿ ಗುಲ್ಬರ್ಗ ವಿವಿ ಸಮಾಜಕಾರ್ಯ ವಿಭಾಗ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಜಂಟಿಯಾಗಿ ಗುರುವಾರ ಆಯೋಜಿಸಿದ್ದ ‘ಬಾಲ ನ್ಯಾಯ ಕಾಯ್ದೆ ಸಮಗ್ರ ಮಕ್ಕಳ ರಕ್ಷಣೆ ಯೋಜನೆ ಮತ್ತು ಮಕ್ಕಳ ಹಕ್ಕುಗಳ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಚೇತನಕುಮಾರ್ ಗಾಂಗಜಿ ಮಾತನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಭರತೇಶ ಬಿ. ಶೀಲವಂತ ಅಧ್ಯಕ್ಷತೆ ವಹಿಸಿದ್ದರು. ಸಂತೋಷ ಕುಲಕರ್ಣಿ, ಮಂಜುಳಾದೇವಿ ರೆಡ್ಡಿ, ವಸಂತಾ ಇದ್ದರು. ಸುಜಾತಾ ಪಾಟೀಲ ನಿರೂಪಿಸಿದರು. ರೇಣುಕಾ ಬನಪಟ್ಟಿ ಸ್ವಾಗತಿಸಿದರು. ಜ್ಯೋತಿ ಡಬರಾಬಾದ ವಂದಿಸಿದರು.

ಪ್ರತಿಕ್ರಿಯಿಸಿ (+)