ಶುಕ್ರವಾರ, ಏಪ್ರಿಲ್ 16, 2021
31 °C

ಮಕ್ಕಳ ಹಕ್ಕು ರಕ್ಷಣೆ ಹೊಣೆ ಎಲ್ಲರ ಮೇಲಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಮಕ್ಕಳ ಹಕ್ಕು ರಕ್ಷಣೆ ಹೊಣೆ ಸರ್ವರ ಮೇಲಿದೆ ಎಂದು ಘಾಟಬೋರಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯೆ ತಂಗುಬಾಯಿ ಮಾಣಿಕರಾವ ಪರಾಂಜಪೆ ಅಭಿಪ್ರಾಯಪಟ್ಟರು. ತಾಲ್ಲೂಕಿನ ಗಡವಂತಿ ಸರ್ಕಾರಿ ಪ್ರೌಢಶಾಲೆ ಪ್ರಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ 2012-13ನೇ ಸಾಲಿನ ಶಾಲೆಗಾಗಿ ನಾವು- ನೀವು ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.ಮಕ್ಕಳ ಕಲಿಕಾ ವೃದ್ಧಿಯ ಜವಾಬ್ದಾರಿ ಕೇವಲ ಶಿಕ್ಷಕರ ಮೇಲೆ ಹೊರಿಸದೇ ತಮ್ಮ ಪಾತ್ರವೂ ಇದೆ ಎನ್ನುವುದನ್ನು ಪಾಲಕರು ಅರಿತುಕೊಳ್ಳಬೇಕು. ಶಾಲಾ ಕೋಣೆಗಿಂತ ಪಾಲಕರ ಬಳಿಯೆ ಹೆಚ್ಚಿನ ಸಮಯ ನೀಡುವ ಹಿನ್ನೆಲೆಯಲ್ಲಿ ಕಲಿಕಾವೃದ್ಧಿ ಮತ್ತು ಅವರ ಇತರೆ ಚಟುವಟಿಕೆಗಳ ಮೇಲೆ ವಿಶೇಷ ನಿಗಾ ಇಡಬೇಕು ಎಂದು ಪರಾಂಜಪೆ ಸಲಹೆ ನೀಡಿದರು. ಶಿಕ್ಷಕ ಶರದ್ ನಾರಾಯಣಪೇಟಕರ್ ಹಕ್ಕುಗಳ ಕುರಿತು ಮಾತನಾಡಿದರು.ತಾಲ್ಲೂಕು ಪಂಚಾಯಿತಿ ಸದಸ್ಯ ಗಜೇಂದ್ರ ಕನಕಟಕರ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸುವ ಮೂಲಕ ಸರ್ಕಾರಿ ಶಾಲೆಗಳ ಮೇಲೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕ ಸೇವೆಯ ಮೂಲಕ ಆಕರ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಲಿವಾಹನ್ ರೂಗನ್ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕ, ಶಿಕ್ಷಕರು ಮತ್ತು ಸಮಾಜದ ಮೇಲೆ ಇರುವ ಜವಾಬ್ದಾರಿಯ ಜೊತೆಗೆ ಚುನಾಯಿತ ಪ್ರತಿನಿಧಿಗಳಾದ ತಮ್ಮ ಹೊಣೆಯ ಕುರಿತು ವಿಸ್ತೃತ ವಿವರಿಸಿದರು. ಗ್ರಾಮದ ಪ್ರಾಥಮಿಕ, ಪ್ರೌಢ ಶಾಲೆಗೆ ಸುತ್ತುಗೋಡೆ ನಿರ್ಮಾಣ ಸಂಬಂಧ ಜಿಲ್ಲಾ ಪಂಚಾಯಿತಿ ಸದಸ್ಯರು ಅನುದಾನ ನೀಡಬೇಕು ಎಂದು ವೇದಿಕೆಯ ಮೂಲಕ ಮನವಿ ಮಾಡಿದರು.ಎ.ಪಿ.ಎಂ.ಸಿ ನಿರ್ದೇಶಕ ಈಶ್ವರ ಕಲ್ಬುರ್ಗಿ, ಶಶಿಕಾಂತ ಗಂಗಸಿರಿ, ಗ್ರಾಮದ ಪ್ರಮುಖರಾದ ಶಾಂತಕುಮಾರ ಜನ್ನಾ, ಶರಣಪ್ಪ ಪೊಲೀಸ್ ಪಾಟೀಲ, ರಾಜಪ್ಪ ಇಟಗಿ, ಚಂದ್ರಮ್ಮ ಕುಂಬಾರ, ಘಾಳೆಮ್ಮ, ವಿದ್ಯಾವತಿ ಪಾಟೀಲ, ಸಿದ್ದಣ್ಣ ಭೂಶೆಟ್ಟಿ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ರಾಮಚಂದ್ರ ಡಿ.ಕುಶೆ, ಝರೆಪ್ಪ ದಂಡಿನ್, ಖುರ್ಷಿದ್, ಪರಮೇಶ್ವರ ಕಲ್ಲೂರ ಮೊದಲಾದವರು ಇದ್ದರು.ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಬಿ.ಆರ್.ಸಿ ಪ್ರಭಾರ ಅಧಿಕಾರಿ ಸಂಗಣ್ಣ ಬಿದರೆಡ್ಡಿ ಶ್ವೇತಪತ್ರ ಮಂಡಿಸಿದರು. ಸಿ.ಆರ್.ಪಿ ನಾಗೇಂದ್ರ ಬಿರಾದಾರ ಪ್ರತಿಜ್ಞಾವಿಧಿ ಬೋಧಿಸಿದರು. ಶಾಲಾ ಮುಖ್ಯಗುರು ಕಾಶಿನಾಥ ಕೂಡ್ಲಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.