ಮಕ್ಕಳ ಹಕ್ಕು ಸಂರಕ್ಷಣೆಗೆ ಸಲಹೆ

ಹನುಮಸಾಗರ: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟು ಕಾನೂನುಗಳು ಮತ್ತು ವಿಶೇಷ ಹಕ್ಕುಗಳಿವೆ. ಅವುಗಳನ್ನು ಪ್ರೋತ್ಸಾಹಿಸುವ ಮನಸ್ಸು ಪಾಲಕರಲ್ಲಿಲ್ಲ ಎಂದು ವಕೀಲ ಮಹಾಂತೇಶ ಕುಷ್ಟಗಿ ಹೇಳಿದರು.
ಶನಿವಾರ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಎನ್ಪಿಇಜಿಇಎಲ್ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳು ಹಾಗೂ ಸಂರಕ್ಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದೆಲ್ಲ ಪಾಲಕರಿಗೆ ಗೊತ್ತಿದ್ದರೂ ನಿರುತ್ಸಾಹದಿಂದಿರುವುದೇ ಮಕ್ಕಳು ಅಪರಾಧ ಲೋಕದಲ್ಲಿ ಕಾಣಲು ನೇರವಾಗಿ ಅವರೇ ಕಾರಣರಾಗಿದ್ದಾರೆ, ಹತ್ತಾರು ಹೊಂಗನಸನ್ನು ತುಂಬಿಕೊಂಡಿರುವ ಎಳೆಯ ಮಕ್ಕಳು ಬೆಳೆಯಲು ಪ್ರೋತ್ಸಾಹ ನೀಡಿ ಅವರನ್ನು ಶೋಷಣೆಯಿಂದ ಮುಕ್ತಗೊಳಿಸಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮುಖ್ಯಶಿಕ್ಷಕ ಖಾಸೀಮಾಬ ಬಂಗಾರಗುಂಡು ಮಾತನಾಡಿ ಮಕ್ಕಳನ್ನು ಸನ್ಮಾರ್ಗದೆಡೆಗೆ ಸಾಗಿಸಲು ಸರ್ಕಾರದ ಹಲವಾರು ಯೋಜನೆಗಳು ಜಾರಿಗೆ ತಂದಿದೆ ಅಲ್ಲದೆ ಶಿಕ್ಷಣ ಮನೆ ಬಾಗಿಲಿಗೆ ಹತ್ತಿರವಾಗಿದೆ
ಹೀಗಿದ್ದಾಗಲೂ ಅದರ ಪ್ರಯೋಜನೆ ಪಡೆದುಕೊಳ್ಳದೆ ಮಕ್ಕಳಿಗೆ ಶಿಕ್ಷಣದ ಬದಲಿಗೆ ಭಾರವಾದ ಕೆಲಸ ನೀಡಿ ಅವರನ್ನು ಶಿಕ್ಷಣದ ಹಕ್ಕಿನಿಂದ ವಂಚಿತರನ್ನಾಗಿಸಿದ್ದೇವೆ ಎಂದು ವಿಷಾದಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಅಂದಾನಪ್ಪ ಕಟಗಿ ಕಾರ್ಯಕ್ರಮ ಉದ್ಘಾಟಿಸಿದರು. ಶಂಕ್ರಪ್ಪ ಮುದುಟಗಿ, ಫರಿದಾಬೇಗಂ ಮಾತನಾಡಿದರು,
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.