ಶುಕ್ರವಾರ, ಜೂನ್ 25, 2021
22 °C

ಮಕ್ಕಳ ಹಕ್ಕು ಸಂರಕ್ಷಣೆ ಜನಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳ ಹಕ್ಕು ಸಂರಕ್ಷಣೆ ಜನಜಾಗೃತಿ

ರಾಯಚೂರು: ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ  ಬಾಲ ಕಾರ್ಮಿಕ ನಿಷೇಧ ಕಾಯ್ದೆ ಅನ್ವಯ ಮಕ್ಕಳನ್ನು `ಕೆಲಸಕ್ಕೆ ಇಟ್ಟುಕೊಳ್ಳುವುದಿಲ್ಲ~ ಎಂಬ ನಾಮ ಫಲಕ ಅಳವಡಿಕೆ ಮೂಲಕ ಸಮುದಾಯಕ್ಕೆ ಜನಜಾಗೃತಿ ಕಾರ್ಯಕ್ರಮವನ್ನು ಜನಚೇತನ ಸಂಸ್ಥೆ ಹಾಗೂ ಮಕ್ಕಳ ಹಕ್ಕು ಸಂರಕ್ಷಣಾ ಯೋಜನೆಯಡಿ ಯುನಿಸೆಫ್ ಘಟಕ ಸಂಯುಕ್ತವಾಗಿ ಮಂಗಳವಾರ ತಾಲ್ಲೂಕಿನಲ್ಲಿ ಯರಗೇರಾ ಗ್ರಾಮದಲ್ಲಿ ಆಯೋಜಿಸಿತ್ತು.ಬಟ್ಟೆ, ಕಿರಾಣಿ, ಚಪ್ಪಲಿ, ಚಕನ್ ಅಂಗಡಿ, ಖಾನಾವಳಿ ಅಂಗಡಿ ಮಾಲೀಕರು ಸ್ವಯಂ ಘೋಷಣೆ ಮಾಡಿಕೊಂಂಡು ನಾಮಫಲಕ ಅಳವಡಿಸಿಕೊಂಡರು. ಪಿಡಿಒ ಮಕರ್ ಬೇಗಂ ಮಾತನಾಡಿ, ಸಮುದಾಯವೇ ಮುಂದೆ ಬಂದು ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳುವುದಿಲ್ಲ ಎಂದು ಮಕ್ಕಳ ಏಳ್ಗೆ ಬಗ್ಗೆ ಗಮನಹರಿಸಿರುವುದು ಪ್ರಶಂಸನೀಯ ಎಂದರು.ಬಾಲಕಾರ್ಮಿಕಳಾಗಿ ದುಡಿದು ಬಳಿಕ ಶಾಲೆ ಸೇರಿ ಈಚೆಗೆ ವಿದೇಶ ಪ್ರಯಾಣ ಮಾಡಿ ಬಂದ ಬಾಲಕಿ ನೀಲಾ ಆಂದೋಲನದಲ್ಲಿ ಪಾಲ್ಗೊಂಡಿದ್ದಳು. ಗ್ರಾಪಂ ಉಪಾಧ್ಯಕ್ಷ ರಾಮಪ್ಪ ನಾಯಕ,  ಅಜೀಜ್, ಫಾರೂಕ್, ರಾಕೇಶರೆಡ್ಡಿ,  ಗ್ರಾಮದ ಕೃಷ್ಣಾಜಿ, ಹರಿಶ್ಚಂದ್ರರೆಡ್ಡಿ, ದಳಪತಿ, ವೀರಯ್ಯ, ಜನಚೇತನ ಸಂಸ್ಥೆಯ ನಿರ್ದೇಶಕ ಆರ್.ಕಿಶನರಾವ್, ಸಂಯೋಜಕ ರಂಗನಾಥ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.