ಮಗನಿಗೆ ಹೆಣ್ಣು ಕೇಳಿದ ಮಹಿಳೆಯರಿಗೆ ಬೆತ್ತಲೆಯ ಶಿಕ್ಷೆ

ಸೋಮವಾರ, ಮೇ 20, 2019
30 °C

ಮಗನಿಗೆ ಹೆಣ್ಣು ಕೇಳಿದ ಮಹಿಳೆಯರಿಗೆ ಬೆತ್ತಲೆಯ ಶಿಕ್ಷೆ

Published:
Updated:

ಲಾಹೋರ್ (ಪಿಟಿಐ): ಮಗನಿಗೆ ಹೆಣ್ಣು ಕೇಳುವುದಕ್ಕಾಗಿ ಹೋಗಿದ್ದ ಮಹಿಳೆ ಹಾಗೂ ಆಕೆಯ ಗೆಳತಿಯನ್ನು ಬೆತ್ತಲೆಗೊಳಿಸಿ ನಡು ಬೀದಿಯಲ್ಲಿ ಮೆರವಣಿಗೆ ಮಾಡಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಹಳ್ಳಿಯಲ್ಲಿ ಮಂಗಳವಾರ ನಡೆದಿದೆ.ಸಕೀನಾ ಮತ್ತು ಆಕೆಯ ಗೆಳತಿ ಸಮೀನಾ ಬೆತ್ತಲೆ ಮೆರವಣಿಗೆಯ ಶಿಕ್ಷೆ ಅನುಭವಿಸಿದವರು. ಸಕೀನಾ ತನ್ನ ಮಗ ಶೋಹಿಬ್‌ನಿಗೆ, ಇರ್ಫಾನ್ ಅಹ್ಮದ್ ಮಗಳಾದ ನಬಿಲಾಳನ್ನು ಮದುವೆ ಮಾಡಿಕೊಡುವಂತೆ ಕೇಳಲು ಅವರ ಮನೆಗೆ ಹೋಗಿದ್ದರು.

 

`ಹೆಣ್ಣು ಕೊಡುವ ವಿಷಯದಲ್ಲಿ ಮಾತುಕತೆ ನಡೆಯುವ ವೇಳೆ ಅಹ್ಮದ್ ಕೋಪೋದ್ರಿಕ್ತರಾಗಿ ತನನ್ನು ಹೊಡೆಯಲಾರಂಭಿಸಿದರು. ಅವರೊಂದಿಗೆ ಸಂಬಂಧಿಕರೂ ಸೇರಿಕೊಂಡು ನನ್ನ ಹಾಗೂ ತನ್ನ ಗೆಳತಿಯನ್ನು ಬೆತ್ತಲೆಗೊಳಿಸಿ ನಡುಬೀದಿಯಲ್ಲಿ ಮೆರವಣಿಗೆ ಮಾಡಿದರು~ ಎಂದು ಸಕೀನಾ ತಿಳಿಸಿದ್ದಾರೆ.ಈ ಘಟನೆಯನ್ನು ಕೆಲವು ಸುದ್ದಿ ವಾಹಿನಿಗಳು ವರದಿ ಮಾಡಿವೆ. ಇನ್ನೂ ಕೆಲವರು ಮೊಬೈಲ್ ಫೋನ್‌ಗಳಲ್ಲಿ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡಿರುವುದಾಗಿ ಅವರು ಹೇಳಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry