ಗುರುವಾರ , ಮೇ 19, 2022
21 °C

ಮಗನ ವಿರುದ್ಧ ವಿಚಾರಣೆ ಆರಂಭಿಸಿದ ನ್ಯಾಯಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್(ಪಿಟಿಐ): ತಮ್ಮ ಮಗನ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ  ಪಾಕ್ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಬುಧವಾರ ಸ್ವಯಂ ಪ್ರೇರಿತವಾಗಿ ಆತನ ವಿರುದ್ಧ ವಿಚಾರಣೆ  ಆರಂಭಿಸಿದರು.ರಿಯಲ್ ಎಸ್ಟೇಟ್ ಉದ್ಯಮಿ ರಿಯಾಜ್ ಹುಸೇನ್ ವಿರುದ್ಧದ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಮೃದುಧೋರಣೆ ತಳೆಯುವಂತೆ ಪ್ರಭಾವ ಬೀರಲು ಅರ್ಸಲನ್ ಇಫ್ತಿಕಾರ್ ರೂ. 30-40 ಕೋಟಿ  ಹಣ ಪಡೆದಿದ್ದಾರೆ. ಅವರ ವಿದೇಶ ಪ್ರವಾಸದ ವೆಚ್ಚವನ್ನು ಹುಸೇನ್ ಭರಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.ಪಾಕಿಸ್ತಾನದ ಹಲವು ಸುದ್ದಿ ವಾಹಿನಿಗಳು ಅರ್ಸಲನ್ ಮತ್ತು ಹುಸೇನ್ ನಡುವಿನ ಸಂಬಂಧ ಹಾಗೂ ಭ್ರಷ್ಟಾಚಾರದ ಕುರಿತು ಮಂಗಳವಾರ ರಾತ್ರಿ ಸುದ್ದಿ ಬಿತ್ತರಿಸಿದ್ದವು. ಇದನ್ನೇ ಆಧಾರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್ ಅರ್ಸಲನ್ ಇಫ್ತಿಕಾರ್‌ಗೆ ನೋಟಿಸ್ ಜಾರಿ ಮಾಡಿತು. ಈ ಪ್ರಕರಣದಲ್ಲಿ ತಮ್ಮ ಮಗನ ಮೇಲಿನ ಆರೋಪ ಸಾಬೀತಾದರೆ, ಕಾನೂನಿನ ಪ್ರಕಾರ ಅವನಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ~ ಎಂದು ಇಫ್ತಿಕಾರ್ ಚೌಧರಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.