ಮಗಳನ್ನು ಕೊಂದ ತಾಯಿ: ಆತ್ಮಹತ್ಯೆಗೆ ವಿಫಲ ಯತ್ನ

7

ಮಗಳನ್ನು ಕೊಂದ ತಾಯಿ: ಆತ್ಮಹತ್ಯೆಗೆ ವಿಫಲ ಯತ್ನ

Published:
Updated:

ಬೆಂಗಳೂರು: ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ ತಾಯಿ, ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಬನಶಂಕರಿ 3ನೇಹಂತದ ಇಟ್ಟಮಡುವಿನಲ್ಲಿ ಶುಕ್ರವಾರ ನಡೆದಿದೆ.

ಘಟನೆಯಲ್ಲಿ ಎಂಟು ವರ್ಷದ ಮಗಳು ಸಾಹಿನಾ ಮೃತಪಟ್ಟಿದ್ದು, ತಾಯಿ ರಮೀಜಾ (25) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಂಧ್ರದ ಕಡಪ ಮೂಲದವರಾದ ರಮೀಜಾ ಮಗಳೊಂದಿಗೆ ಇಟ್ಟಮಡುವಿನ ಬಾಲಾಜಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಎರಡು ವರ್ಷದ ಹಿಂದೆ ಅವರ ಪತಿ ಮುಸ್ತಾನಯ್ಯ ಸಾವನ್ನಪ್ಪಿದ್ದರು. ಸಮೀಪದ ಬಟ್ಟೆ ಅಂಗಡಿಯೊಂದರಲ್ಲಿ ರಮೀಜಾ ಕೆಲಸ ಮಾಡುತ್ತಿದ್ದರು. ಅಂಗಡಿ ಮಾಲೀಕರು ಮೂರು ತಿಂಗಳಿಂದ ವೇತನ ನೀಡಿರಲಿಲ್ಲ. ಇದರಿಂದ ಉಂಟಾದ ಆರ್ಥಿಕ ಸಮಸ್ಯೆಯಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಮಗಳು ಸಾಹಿನಾ ಇಟ್ಟಮಡು ಸಮೀಪದ ಶುಭಮಂಗಳ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದರು. ಇಂದು ಕೆಲಸಕ್ಕೆ ಹೋಗದ ರಮೀಜಾ ಮಗಳನ್ನೂ ಶಾಲೆಗೆ ಕಳುಹಿಸದೆ ಮಗಳ ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ರಮೀಜಾ ಅವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ ಹಾಗೂ ಬಟ್ಟೆ ಅಂಗಡಿ ಮಾಲೀಕ ಧನಂಜಯರೆಡ್ಡಿ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry