ಮಗಳ ದಯಾಮರಣಕ್ಕೆ ತಾಯಿ ಅರ್ಜಿ

ಗುರುವಾರ , ಜೂಲೈ 18, 2019
28 °C

ಮಗಳ ದಯಾಮರಣಕ್ಕೆ ತಾಯಿ ಅರ್ಜಿ

Published:
Updated:

ಈರೋಡ್ (ಪಿಟಿಐ): ಸೆರೆಬ್ರಲ್ ಪಾಲ್ಸಿ  ಸಮಸ್ಯೆಯಿಂದ  ಬಳಸುತ್ತಿರುವ ತನ್ನ ಕರುಳಿನ ಕುಡಿಯ ಸ್ಥಿತಿ ಕಂಡು ಮನ ನೊಂದಿರುವ ತಾಯಿಯೊಬ್ಬಳು ತನ್ನ ಮಗಳಿಗೆ ದಯಾಮರಣಕ್ಕೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಯ ಮೊರೆ ಹೋಗಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಹುಟ್ಟಿನಿಂದಲೂ ಮಾತನಾಡಲು ಬಾರದ, ನಡೆಯಲಾಗದ, ಯಾರೊಬ್ಬರನ್ನು ಗುರುತಿಸಲಾಗದ ಹಾಗೂ ತನ್ನ ಪ್ರತಿ ಕರ್ಮಗಳಿಗೂ ಬೇರೆಯವರನ್ನೇ ಅವಲಂಬಿಸಿರುವ 14 ವರ್ಷದ ಬಾಲಕಿಯ ಕರುಣ ಕಥೆಯಿದು.ಈರೋಡ್‌ನ ಜಿಲ್ಲಾಧಿಕಾರಿಗೆ ಈ ಕುರಿತು ಮನವಿ ಸಲ್ಲಿಸುವ ಮೂಲಕ ತನ್ನ ಅಳಲನ್ನು ತೋಡಿಕೊಂಡಿರುವ ಈ ತಾಯಿ, ತನ್ನ ಮಗಳ ದಯಾಮರಣಕ್ಕೆ ಅವಕಾಶ ನೀಡುವ ಮೂಲಕ ಅವಳಿಗೆ ಮುಕ್ತಿ ನೀಡಬೇಕೆಂದು ಕೇಳಿಕೊಂಡಿದ್ದಾಳೆ.ಸೆರೆಬ್ರಲ್ ಪಾಲ್ಸಿ  ಹುಟ್ಟಿನಿಂದಲೇ ಬರುವ ಒಂದು ಬಗೆಯ ಸಮಸ್ಯೆ. ಇದಕ್ಕೆ ತುತ್ತಾಗಿರುವವರನ್ನು ಗುಣಪಡಿಸುವುದು ಕಠಿಣ ಎಂದು ವೈದರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry