ಸೋಮವಾರ, ಮಾರ್ಚ್ 8, 2021
31 °C

ಮಗಳ ಬಿಕಿನಿಗೆ ಅಪ್ಪನ ಮೌನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಗಳ ಬಿಕಿನಿಗೆ ಅಪ್ಪನ ಮೌನ

‘ಬೇವಕೂಫಿಯಾನ್‌’ ಚಿತ್ರದಲ್ಲಿ ನಟಿ ಸೋನಂ ಕಪೂರ್‌ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋನಂ ಕಪೂರ್‌ ಈಜುಡುಗೆ ಧರಿಸಿ ಧೈರ್ಯದಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡು ಎಲ್ಲರ ಹುಬ್ಬೇರುವಂತೆ ಮಾಡಿದರೆ, ಆಕೆಯ ತಂದೆ ಅನಿಲ್‌ ಕಪೂರ್‌ ಮಾತ್ರ ಶಾಂತವಾಗಿದ್ದರಂತೆ. ಬಿಕಿನಿ ಧರಿಸಿ ನಟಿಸುತ್ತಿರುವುದರ ಬಗ್ಗೆ ಮೌನ ವಹಿಸಿದ್ದ ಅನಿಲ್‌ ಕಪೂರ್‌, ‘ಈ ಚಿತ್ರ ಸೋನಂಗೆ ಒಳ್ಳೆ ಬ್ರೇಕ್ ನೀಡಲಿದೆ’ ಎಂದು ಕೂಲ್‌ ಆಗಿ ಹೇಳಿದರಂತೆ.‘ಬೇವಕೂಫಿಯಾನ್‌’ ಚಿತ್ರಕ್ಕಾಗಿ ನಾನು ಬಿಕಿನಿ ಧರಿಸುತ್ತಿರುವ ವಿಚಾರ ಪಪ್ಪನಿಗೂ ಗೊತ್ತಿತ್ತು. ಅವರೂ ಒಬ್ಬ  ಕಲಾವಿದ. ಮುಕ್ತ ಮನಸ್ಸಿನವರು. ನಿಜ ಹೇಳಬೇಕು ಅಂದರೆ, ನಾನು ನಟಿಯಾಗಲು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದೇ ಅವರು. ಹೊಸ ಚಿತ್ರದಲ್ಲಿ ನಾನು ಬಿಕಿನಿ ತೊಟ್ಟು ಅಭಿನಯಿಸುತ್ತಿರುವ ವಿಚಾರದ ಬಗ್ಗೆ ಅವರು ತಕರಾರು ಎತ್ತಲಿಲ್ಲ. ಈ ಚಿತ್ರ ನಿನಗೆ ಒಳ್ಳೆಯ ಓಪನಿಂಗ್‌ ಎಂದಷ್ಟೇ ಹೇಳಿದರು’ ಎನ್ನುತ್ತಾರೆ ಸೋನಂ.ಸೋನಂ ಕಪೂರ್‌ ಟೂ ಪೀಸ್‌ ಧರಿಸಿ ಕಂಫರ್ಟ್‌ ಆಗಿ ನಟಿಸಬಲ್ಲರೇ ಎಂಬ ಬಗ್ಗೆ ಈ ಮೊದಲು ಸೆಟ್‌ನಲ್ಲಿ ಬಹಳಷ್ಟು ಚರ್ಚೆ ನಡೆದಿತ್ತಂತೆ. ಆದರೆ, ಚಿತ್ರಕ್ಕಾಗಿ ಬಿಕಿನಿ ತೊಡಬೇಕಾಗುತ್ತದೆ ಎಂಬ ವಿಚಾರ ಸೋನಂಗೆ ಮೊದಲೇ ತಿಳಿದಿತ್ತಂತೆ. ಅದೇರೀತಿ, ಟೂ ಪೀಸ್‌ ಧರಿಸಿಯೂ ನಾನು ಆರಾಮವಾಗಿ ನಟಿಸಬಲ್ಲೆ ಎಂಬ ಆತ್ಮವಿಶ್ವಾಸ ಅವರಲ್ಲಿ ಇತ್ತಂತೆ.‘ಈ ಚಿತ್ರವನ್ನು ಒಪ್ಪಿ ಸಹಿ ಹಾಕುವಾಗಲೇ ಈ ಶಾಟ್‌ ಕುರಿತಂತೆ ಕೆಲವೊಂದು ವಿಚಾರಗಳನ್ನು ಹೇಳಿಕೊಂಡಿದ್ದೆ. ನನ್ನ ದೇಹ ನೇರವಾಗಿದೆ, ಸೊಂಟದ ಭಾಗ ತೆಳುವಾಗಿದೆ. ನನ್ನ ದೇಹಾಕಾರಕ್ಕೆ ಹೊಂದುವಂತಹ ಸ್ವಿಮ್‌ಸೂಟ್‌ ಬೇಕು ಇತ್ಯಾದಿ. ಅಂದಹಾಗೆ, ‘ಧೂಮ್‌’ ಮತ್ತು ‘ರೇಸ್‌’ ಚಿತ್ರಗಳಲ್ಲಿ ನಾಯಕಿಯರು ಬಿಕಿನಿ ತೊಟ್ಟು ನಡೆದು ಬರುವ ದೃಶ್ಯದಲ್ಲಿ ಅವರ ದೇಹದ ಪ್ರತಿಯೊಂದು ಉಬ್ಬುತಗ್ಗುಗಳನ್ನು ಸ್ಪಷ್ಟವಾಗಿ ಕಾಣಿಸುವಂತೆ ತೋರಿಸಲಾಗಿತ್ತು. ಅಲ್ಲಿ ಕ್ಯಾಮೆರಾ ಚಮತ್ಕಾರ ನಡೆದಿತ್ತು. ಹಾಗಾಗಿ, ಆ ಸಿನಿಮಾಗಳಂತೆ ನಮ್ಮ ಚಿತ್ರದ ಬಿಕಿನಿ ಶಾಟ್‌ ತೆಗೆಯುವುದು ಬೇಡ. ಬದಲಾಗಿ, ಸಾಮಾನ್ಯ ದೃಶ್ಯಗಳ ಮಾದರಿಯಲ್ಲೇ ಈ ದೃಶ್ಯವನ್ನೂ ಚಿತ್ರೀಕರಿಸಬೇಕು’ ಎಂದು ಸಲಹೆ ನೀಡಿದ್ದೆ ಎನ್ನುತ್ತಾರೆ ಸೋನಂ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.