ಮಗಳ ಮೇಲೆ ಅತ್ಯಾಚಾರ- ಮಲತಂದೆ ಬಂಧನ

7

ಮಗಳ ಮೇಲೆ ಅತ್ಯಾಚಾರ- ಮಲತಂದೆ ಬಂಧನ

Published:
Updated:

ಬೆಂಗಳೂರು: ಮಲ ಮಗಳ ಮೇಲೆ ಮೂರು ತಿಂಗಳಿನಿಂದ ಅತ್ಯಾಚಾರ ಎಸಗುತ್ತಿದ್ದ ಆರೋಪದ ಮೇಲೆ ಬನ್ನೇರುಘಟ್ಟ ರಸ್ತೆ ಪಾಯಪ್ಪ ಗಾರ್ಡನ್ ನಿವಾಸಿ ಆರ್ಮುಗಂ (37) ಎಂಬಾತನನ್ನು ಮೈಕೊಲೇಔಟ್ ಪೊಲೀಸರು ಬಂಧಿಸಿದ್ದಾರೆ. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ನಾಗಲಕ್ಷ್ಮಿ (ಹೆಸರು ಬದಲಿಸಿದೆ) ಎಂಬುವರು ಟ್ರಾವೆಲ್ಸ್ ಕಂಪೆನಿಯೊಂದರಲ್ಲಿ ಚಾಲಕನಾಗಿದ್ದ ಆರ್ಮುಗಂನನ್ನು ವಿವಾಹವಾಗಿದ್ದರು.ವಿಚ್ಛೇದಿತ ನಾಗಲಕ್ಷ್ಮಿ ಅವರಿಗೆ ಮೊದಲೇ ಸುಕನ್ಯಾ (ಹೆಸರು ಬದಲಿಸಿದೆ) ಎಂಬ ಎರಡು ವರ್ಷದ ಹೆಣ್ಣು ಮಗುವಿತ್ತು.ನಾಗಲಕ್ಷ್ಮಿಯನ್ನು ವಿವಾಹವಾದ ಆರ್ಮುಗಂ, ಸುಕನ್ಯಾಳನ್ನು ಜತೆಯಲ್ಲೇ ಸಾಕಿಕೊಂಡಿದ್ದ. ಸುಕನ್ಯಾ ಸದ್ಯ ಒಂಬತ್ತನೇ ತರಗತಿ ಓದುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಲಕ್ಕವಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ಹೋಗುವ ನೆಪದಲ್ಲಿ ಆರ್ಮುಗಂ 2010ರ ಡಿಸೆಂಬರ್‌ನಲ್ಲಿ ಸುಕನ್ಯಾಳನ್ನು ಜತೆಗೆ ಕರೆದುಕೊಂಡು ಹೋಗಿದ್ದ.ಆದರೆ ಸಂಬಂಧಿಕರ ಮನೆಗೆ ಹೋಗದ ಆತ, ಲಕ್ಕವಳ್ಳಿ ಸಮೀಪದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆ ನಂತರವೂ ಆತ ಪತ್ನಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ. ಅಲ್ಲದೇ ಅತ್ಯಾಚಾರದ ವಿಷಯವನ್ನು ಯಾರಿಗೂ ಹೇಳದಂತೆ ಆಕೆಗೆ ಕೊಲೆ ಬೆದರಿಕೆ ಹಾಕಿದ್ದ.ಇದರಿಂದ ಆತಂಕಗೊಂಡ ಆಕೆ ಅತ್ಯಾಚಾರದ ವಿಷಯವನ್ನು ಬಹಿರಂಗಪಡಿಸಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಸುಕನ್ಯಾಳಲ್ಲಿ ಗರ್ಭಿಣಿಯ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದ ಕಾರಣ ಅನುಮಾನಗೊಂಡ ನಾಗಲಕ್ಷ್ಮಿ, ಮಗಳನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಿದಾಗ ಆಕೆ ಗರ್ಭಿಣಿಯಾಗಿರುವುದು ಗೊತ್ತಾಯಿತು. ನಂತರ ಆಕೆ ಅತ್ಯಾಚಾರದ ಸಂಗತಿಯನ್ನು ಬಹಿರಂಗಪಡಿಸಿದಳು. ಈ ಸಂಬಂಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry