ಶುಕ್ರವಾರ, ಮೇ 27, 2022
21 °C

ಮಗಳ ಶಸ್ತ್ರಚಿಕಿತ್ಸೆ ಖರ್ಚಿಗೆ ನೆರವಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನ್ನ ಮಗಳು ಸ್ನೇಹಾ (6) ರಸ್ತೆಯಲ್ಲಿ ಆಡುವಾಗ ವಾಹನ ಅಪಘಾತಕ್ಕೀಡಾಗಿ ಎರಡು ಕಾಲುಗಳ ಮೂಳೆಗಳು ಮುರಿದು ಸೇಂಟ್ ಜಾನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿ ಮಾಡಿಸಲಾಗಿದೆ. ಇದಕ್ಕಾಗಿ 4.62 ಲಕ್ಷ ರೂಪಾಯಿ ಬಿಲ್ ಆಗಿದೆ. ಆದರೆ ನಾನು ಬೇರೆಯವರ ಮನೆಗೆಲಸ ಮಾಡಿಕೊಂಡು ಜೀವಿಸುತ್ತಿರುವುದರಿಂದ ನನ್ನ ತಾಯಿಯ ಸಹಾಯದಿಂದ ಮೂರು ಲಕ್ಷ ರೂಪಾಯಿಯಷ್ಟು ಬಿಲ್ ಪಾವತಿ ಮಾಡಿದ್ದೇನೆ.ಆದರೆ ಆಸ್ಪತ್ರೆಗೆ ಇನ್ನೂ 1.62 ಲಕ್ಷ ರೂಪಾಯಿ ಪಾವತಿ ಮಾಡಬೇಕಾಗಿದೆ. ಇಷ್ಟು ಹಣ ಇಲ್ಲದ ಕಾರಣ, ದಾನಿಗಳು ನೆರವು ನೀಡಿದರೆ ನನ್ನ ಮಗಳನ್ನು ಆಸ್ಪತ್ರೆಯಿಂದ ಮನೆಗೆ ಕರೆತರಲು ಸಹಾಯವಾಗುತ್ತದೆ. ಚೆಕ್ ಅಥವಾ ನಗದನ್ನು ನನ್ನ ತಾಯಿ ಅಂಜನಮ್ಮ, ಎಸ್‌ಬಿ ಅಕೌಂಟ್ ನಂ. 04712010034821, ಸಿಂಡಿಕೇಟ್ ಬ್ಯಾಂಕ್, ಶಂಕರನಗರ, ಮಹಾಲಕ್ಷ್ಮಿ ಲೇಔಟ್, ಬೆಂಗಳೂರು ಇಲ್ಲಿಗೆ ಪಾವತಿ ಮಾಡಬಹುದು. ಮೊ.ನಂ. 9740059889.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.