ಶನಿವಾರ, ಆಗಸ್ಟ್ 24, 2019
23 °C

`ಮಗುವಿಗೊಂದು ಮರ ನೆಡಿ'

Published:
Updated:
`ಮಗುವಿಗೊಂದು ಮರ ನೆಡಿ'

ಹುಣಸಗಿ: ಸಮೀಪದ ಅರಕೇರಾ ಜೆ. ಗ್ರಾಮದ ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವನಮಹೋತ್ಸವ ಆಚರಿಸಲಾಯಿತು.ಡಾ. ಎಸ್.ಎಸ್. ದೇಸಾಯಿ ಮಾತನಾಡಿ, ಒಂದು ಮರ ಮಾನವನ ಜೀವನಕ್ಕೆ ಬೇಕಾದ ಆಮ್ಲಜನಕವನ್ನು ನೀಡುತ್ತದೆ. ಅರಣ್ಯ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬ ವಿದ್ಯಾರ್ಥಿಯೂ ಕಾರಣವಾಗಬೇಕು. ಮಗುವಿಗೊಂದು ಮರ ನೆಡಬೇಕು ಎಂದರು.

ನಾವು ಹೆಚ್ಚು ಸಸಿಗಳನ್ನು ನೆಡುವ ಮೂಲಕ ರಾಷ್ಟ್ರದ ವನ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು ಎಂದರು.ಶಿಕ್ಷಕ ಬಸವರಾಜ ಸಜ್ಜನರ, ಇತ್ತೀಚಿಗೆ ಭಾರತ ಜನಸಂಖ್ಯೆ ಹೆಚ್ಚಿದಂತೆ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಇದರಿಂದ ವನ ಸಂಪತ್ತು ಕಡಿಮೆಯಾಗುತ್ತಿದೆ. ಗುಜರಾತ್‌ನಲ್ಲಿ 38 ಸಾವಿರ ಎಕರೆಯಲ್ಲಿ ನಿರ್ಮಾಣವಾಗುತ್ತಿರುವ `ದೊಲೆವಾ'ನಗರ ನಿರ್ಮಾಣವೇ ಉದಾಹರಣೆ ಎಂದರು.ಮುಖ್ಯಗುರು ಬಸವರಾಜ ಪಲಗಲದಿನ್ನಿ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷೆ ಮಹಾದೇವಿ ಮಾತನಾಡಿದರು. ಪರಿಮಳಾ ಸ್ವಾಗತಿಸಿದರು. ಪುಷ್ಪಾ ವಂದಿಸಿದರು. ಪದ್ಮಾ ನಿರೂಪಿಸಿದರು.

Post Comments (+)