ಗುರುವಾರ , ಅಕ್ಟೋಬರ್ 17, 2019
21 °C

ಮಗುವಿನ ಮೇಲೆರಗಿದ ಹುಲಿ

Published:
Updated:

ಮಾಸ್ಕೊ (ಐಎಎನ್‌ಎಸ್/ಆರ್‌ಐಎ ನೊವೊಸ್ತಿ): ರಷ್ಯದ ಅಮುರ್ ಪ್ರಾಂತ್ಯದ ಮೃಗಾಲಯದಲ್ಲಿ 3 ವರ್ಷದ ಮಗುವಿನ ಮೇಲೆ ಹುಲಿಯೊಂದು ಬುಧವಾರ ದಾಳಿ ಮಾಡಿದ್ದು, ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.`ಛಾಯಾಚಿತ್ರ ತೆಗೆಯಲು ಪೋಷಕರು ತಮ್ಮ ಮಗುವನ್ನು ಹುಲಿ ಬೋನಿಗೆ ತೀರ ಸನಿಹದಲ್ಲಿ ನಿಲ್ಲಿಸಿದ್ದರು. ಆಗ ಹುಲಿ ಮಗುವಿನ ಮೇಲೆ ದಾಳಿ ಮಾಡಿದೆ~ ಎಂದು ಪ್ರಾಂತೀಯ ಭದ್ರತಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

 

Post Comments (+)