ಮಗುವಿನ ಮೇಲೆ ಹಲ್ಲೆ; ಪ್ರತಿಭಟನೆ

7

ಮಗುವಿನ ಮೇಲೆ ಹಲ್ಲೆ; ಪ್ರತಿಭಟನೆ

Published:
Updated:

ಎಚ್.ಡಿ.ಕೋಟೆ: ಅಣ್ಣೂರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಮಗುವಿನ ಮೇಲೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ ಎಂದು ಆರೋಪಿಸಿ ಮಂಗಳವಾರ ಮಗುವಿನ ಪೋಷಕರು ಪ್ರತಿಭಟನೆ ನಡೆಸಿದರು.ಅಣ್ಣೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಗಿರಿಜಮ್ಮ ಇದೇ ಗ್ರಾಮದ ನಂಜುಂಡಾಚಾರ್‌ರವರ ಪುತ್ರಿ ನಾಲ್ಕು ವರ್ಷದ ಲಾವಣ್ಯ  ಎಂಬುವವಳಿಗೆ ಸೋಮವಾರ ಹೊಡೆದಿದ್ದಾರೆ ಎಂದು ಆರೋಪಿಸಿ ನಿಸರ್ಗ ಫೌಂಡೇಷನ್ ಸಂಸ್ಥೆಯ ಮಕ್ಕಳ ಸಹಾಯವಾಣಿ 1098 ಸಹಾಯದೊಂದಿಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಲಾಗಿದೆ.ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಯಿತು.ಮಕ್ಕಳ ಸಹಾಯವಾಣಿ 1098 ತಾಲ್ಲೂಕು ಸಂಯೋಜಕರಾದ ಪ್ರಭು, ಸಿಬ್ಬಂದಿ ಗುರುದೇವಾರಾಧ್ಯ, ಚಿಕ್ಕತಿಮ್ಮ ನಾಯಕ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry