ಭಾನುವಾರ, ಮೇ 22, 2022
23 °C

ಮಗುವಿನ ಹೃದಯ ಚಿಕಿತ್ಸೆಗೆ ನೆರವಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ನನ್ನ ಎರಡು ತಿಂಗಳ ಹೆಣ್ಣು ಮಗು ನ್ಯೂಮೋನಿಯಾ ಮತ್ತು ಹೃದಯದ ತೊಂದರೆಯಿಂದ ನರಳುತ್ತಿದ್ದರಿಂದ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಸೇರಿಸಲಾಯಿತು. ಕಳೆದ 40ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಮಗುವಿನ ಉಸಿರಾಟಕ್ಕಾಗಿ ವೆಂಟಿಲೇಟರ್ ಅಳವಡಿಸಲಾಗಿದೆ. ಮಗುವನ್ನು ಈಗ ನಾರಾಯಣ ಹೃದಯಾಲಯಕ್ಕೆ ಸೇರಿಸಲು ವೈದ್ಯರು ಸಲಹೆ ಮಾಡಿದ್ದಾರೆ. ಆಸ್ಪತ್ರೆಯ ಖರ್ಚು ಈಗಾಗಲೇ ಎರಡು ಲಕ್ಷ ರೂಪಾಯಿ ದಾಟಿದೆ.ಚಿಂತಾಮಣಿ ತಾಲ್ಲೂಕಿನ ಗೌನಪಲ್ಲಿಯವರಾದ ನಾನು, ನನ್ನ ಪತಿ  ಕೂಲಿ ಮಾಡಿ ಬದುಕುತ್ತಿದ್ದೇವೆ. ಇಷ್ಟು ದುಬಾರಿ ಹಣವನ್ನು ಹೊಂದಿಸಲಾಗದೆ ಪರದಾಡುತ್ತಿದ್ದೇವೆ. ಆದ್ದರಿಂದ ದಾನಿಗಳು ಉದಾರವಾಗಿ ನೆರವು ನೀಡಬೇಕೆಂದು ಮನವಿ ಮಾಡುತ್ತೇನೆ. ಚೆಕ್‌ಗಳನ್ನು ನನ್ನ ಚಿಕ್ಕಪ್ಪ ಎಲ್. ಜಾಫರ್ ಬಾಷಾ, ಎಸ್‌ಬಿ ಅಕೌಂಟ್ ನಂ. 9458, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಗೌನಪಲ್ಲಿ, ಚಿಂತಾಮಣಿ ತಾ. ಇಲ್ಲಿಗೆ ಕಳುಹಿಸಬಹುದು. ಮೊ.8123209043.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.