ಗುರುವಾರ , ನವೆಂಬರ್ 21, 2019
20 °C

ಮಗು ಒತ್ತೆ: ಬ್ರಿಟನ್‌ಗೆ ಭಾರತ ಮನವಿ

Published:
Updated:

ನವದೆಹಲಿ (ಐಎಎನ್‌ಎಸ್): ಪೋಷಕರಿಂದ ಶೋಷಣೆಗೆ ಒಳಗಾದ ಶಂಕೆಯ ಮೇಲೆ ಬ್ರಿಟನ್ ಸರ್ಕಾರ ಅನಿವಾಸಿ ಭಾರತೀಯ ದಂಪತಿಯ ಐದೂವರೆ ವರ್ಷದ ಮಗುವನ್ನು ಕಿತ್ತುಕೊಂಡು ಪಾಲನಾ ಕೇಂದ್ರದ ವಶಕ್ಕೆ ಒಪ್ಪಿಸಿದ ಘಟನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಹೆಚ್ಚಿನ ಮಾಹಿತಿಯನ್ನು ಕೋರಿದೆ.ಘಟನೆಗೆ ಸಂಬಂಧಿಸಿದಂತೆ ಸದ್ಯಕ್ಕೆ ನಮ್ಮ ಬಳಿ ಸಂಪೂರ್ಣ ಮಾಹಿತಿ ಇಲ್ಲ. ಸಂಪೂರ್ಣ ಮಾಹಿತಿ ಒದಗಿಸುವಂತೆ ಬ್ರಿಟನ್‌ಗೆ ಮನವಿ ಸಲ್ಲಿಸಲಾಗಿದ್ದು ಅಗತ್ಯ ಕಂಡುಬಂದಲ್ಲಿ ರಾಜತಾಂತ್ರಿಕ ನೆರವು ಒದಗಿಸಲಾಗುವುದು'ಎಂದು ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)