ಮಗು ಮೇಲೆ ಅತ್ಯಾಚಾರದ ಆರೋಪಿ ಸೆರೆ

7

ಮಗು ಮೇಲೆ ಅತ್ಯಾಚಾರದ ಆರೋಪಿ ಸೆರೆ

Published:
Updated:

 


ಭಾಲ್ಕಿ: ತಾಲ್ಲೂಕಿನ ಸಾಯಗಾಂವದಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ತಲೆ ಮರೆಸಿಕೊಂಡಿದ್ದ ಆರೋಪಿ, ಅದೇ ಗ್ರಾಮದ ಜೀಪ್   ಚಾಲಕ ದಯಾನಂದ ಶೇಷಾರಾವ ಬೊರಾಳೆ (29) ಎಂಬಾತನನ್ನು ಬುಧವಾರ ಭಾಲ್ಕಿ ಬಸ್ ನಿಲ್ದಾಣದಲ್ಲಿ ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

 

ಅತ್ಯಾಚಾರಕ್ಕೆ ಒಳಗಾಗಿ ಗಾಯಗೊಂಡಿರುವ ಬಾಲಕಿಯು ಈಗ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. 

 

ಬಾಲಕಿಯು ಸೋಮವಾರ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಆರೋಪಿಯು ಕತ್ತಲೆಯಲ್ಲಿ ನುಸುಳಿ ಬಂದಿದ್ದ. ಆಕೆಯ ಬಾಯಿ ಮುಚ್ಚಿ ಎತ್ತಿಕೊಂಡು ಮನೆಯ ಹಿಂದಿನ ತಿಪ್ಪೆಗೆ ಕರೆದೊಯ್ದಿದ್ದ. ಅಲ್ಲಿಯೇ ಅತ್ಯಾಚಾರವೆಸಗಿ ಪರಾರಿಯಾಗಿದ್ದ. ಮಗು ಗುಪ್ತಾಂಗದಲ್ಲಿ ರಕ್ತಸ್ರಾವವಾಗಿ ನರಳುತ್ತಾ ಬಿದ್ದಿದೆ. ತಾಯಿ ಹುಡುಕುತ್ತಾ ಮನೆಯ ಹಿಂದೆ ಹೋಗಿ ನೋಡಿ ಗಾಬರಿಗೊಂಡಿದ್ದಾರೆ. ನಂತರ ಪೊಲೀಸರಿಗೆ ದೂರು ನೀಡಿದ್ದರು. ಈ ಹೇಯ ಕೃತ್ಯವನ್ನು ಸಾರ್ವಜನಿಕರು ಖಂಡಿಸಿದ್ದಾರೆ. ಆರೋಪಿಯ ವಿರುದ್ಧ ಅತ್ಯಂತ ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದಾರೆ.   

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry